alex Certify ತೀರ್ಥಹಳ್ಳಿಗೆ ಬಂದರೂ ರಾಹುಲ್ ಜೊತೆ ವೇದಿಕೆ ಹಂಚಿಕೊಳ್ಳದ ಕಿಮ್ಮನೆ; ಇದರ ಹಿಂದಿದೆ ಈ ಲೆಕ್ಕಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೀರ್ಥಹಳ್ಳಿಗೆ ಬಂದರೂ ರಾಹುಲ್ ಜೊತೆ ವೇದಿಕೆ ಹಂಚಿಕೊಳ್ಳದ ಕಿಮ್ಮನೆ; ಇದರ ಹಿಂದಿದೆ ಈ ಲೆಕ್ಕಾಚಾರ

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರಮುಖ ಪಕ್ಷಗಳ ನಾಯಕರು ತಮ್ಮ-ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಸ್ಟಾರ್ ಪ್ರಚಾರಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಮೊದಲಾದವರು ಈಗಾಗಲೇ ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ.

ಮಂಗಳವಾರದಂದು ಸಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಸಮಾವೇಶ ನಡೆದಿದ್ದು, ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಈ ಸಮಾವೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಆಗಮಿಸಿದ್ದು, ಆದರೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ವೇದಿಕೆ ಮೇಲೆ ಉಪಸ್ಥಿತರಿರಲಿಲ್ಲ.

ಇದು ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದು, ಆದರೆ ಅಸಲಿ ಸಂಗತಿಯೇ ಬೇರೆ ಇತ್ತು. ಸ್ಟಾರ್ ಪ್ರಚಾರಕರು ಆಗಮಿಸಿದ ವೇಳೆ ಅಭ್ಯರ್ಥಿ ಅವರ ಜೊತೆ ಕಾಣಿಸಿಕೊಂಡರೆ ನೀತಿ ಸಂಹಿತೆ ಪ್ರಕಾರ ಸಮಾವೇಶದ ಪೂರ್ಣ ವೆಚ್ಚ ಅಭ್ಯರ್ಥಿಯ ಖಾತೆಗೆ ದಾಖಲಾಗುತ್ತಿತ್ತು. ಚುನಾವಣಾ ಆಯೋಗದ ಪ್ರಕಾರ ಓರ್ವ ಅಭ್ಯರ್ಥಿ 40 ಲಕ್ಷ ರೂಪಾಯಿ ವೆಚ್ಚ ಮಾಡಬಹುದಾಗಿದ್ದು, ಸ್ಟಾರ್ ಪ್ರಚಾರಕರ ವೆಚ್ಚ ತಮ್ಮ ಖಾತೆಗೆ ಸೇರಿದರೆ ಇದನ್ನು ಸರಿದೂಗಿಸುವುದು ಕಷ್ಟ ಎಂಬ ಕಾರಣಕ್ಕೆ ಕಿಮ್ಮನೆ ವೇದಿಕೆಯಿಂದ ದೂರ ಉಳಿದಿದ್ದರು ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...