ಮಾನವ ಕಳ್ಳ ಸಾಗಾಣೆ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇತ್ತಿಚೆಗೆ ದೊಡ್ಡ ಮಟ್ಟದ ವೇಶ್ಯಾಟಿಕೆ ದಂಧೆಯ ಜಾಲವನ್ನ ಮುಂಬೈ ಪೊಲೀಸ್ ಮೀರಾ ಭಯಂದರ್- ವಸಾಯಿ ವಿರಾರ್ (MBVV) ಮಾನವ ಕಳ್ಳ ಸಾಗಣೆ ವಿರೋಧಿ ಘಟಕ(AHTU) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಮೀರಾ ರಸ್ತೆಯ 34 ವರ್ಷದ ತೃತೀಯಲಿಂಗಿ ಮಹಿಳೆ ಕೂಡ ಒಬ್ಬರಾಗಿದ್ದಾರೆ. ಈಕೆಯೇ ಮಹಿಳೆಯರ ಅನೈತಿಕ ಸಾಗಾಟದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿದೆ.
ಸಿಕ್ಕ ಸುಳಿವಿನ ಆಧಾರದ ಮೇಲೆ ಮುಂಬೈ ಎಎಸ್ಐ- ಉಮೇಶ್ ಪಾಟೀಲ್ ನೇತೃತ್ವದಲ್ಲಿ ತಂಡ ಮತ್ತು ಪೊಲೀಸ ಇನ್ಸ್ಪೆಕ್ಟರ್ ಸಮೀರ್ ಅಹಿರಾರಾವ್ ಅವರ ಮೇಲ್ವಿಚಾರಣೆಯಲ್ಲಿ ಗ್ರಾಹಕರ ಸೋಗಿನಲ್ಲಿ ಹೋಗಿ ಈ ಜಾಲವನ್ನ ಪತ್ತೆ ಹಚ್ಚಿದ್ದಾರೆ.
ಈ ಜಾಲವು ಮಾಡೆಲ್ ಕೆಲಸ ಕೊಡಿಸುವುದಾಗಿ, ಧಾರಾವಾಹಿ, ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಕೊಡುವುದಾಗಿ ಹೇಳಿ ಯುವತಿಯರ ಬ್ರೇನ್ವಾಶ್ ಮಾಡಿ ವೇಶ್ಯಾವಾಟಿಕೆ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಇವರು ಈ ಎಲ್ಲ ವ್ಯವಹಾರಗಳನ್ನ ವಾಟ್ಸ್ಅಪ್ ಮೂಲಕವೇ ನಡೆಯುತ್ತಿತ್ತು, ಎಂದು ಹೆಚ್ಚಿನ ತನಿಖೆಯಿಂದ ತಿಳಿದು ಬಂದಿದೆ.
ಸದ್ಯಕ್ಕೆ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 370 ಮತ್ತು ಅನೈತಿಕ ಕಳ್ಳ ಸಾಗಣೆ ತಡೆ ಕಾಯ್ದೆ(ಪಿಐಟಿಎ) ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ರಕ್ಷಿಸಲಾದ ಮಹಿಳೆಯರನ್ನ ಎಲ್ಲ ಕಾನೂನಿನಡಿಯಲ್ಲಿ ಬರುವ ವಿಧಿವಿಧಾನಗಳನ್ನ ಪೂರೈಸಿ ನಂತರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುವುದು.