2024 ರ ವೇಳೆಗೆ ಎಲ್ಲಾ ಹಳ್ಳಿಗಳಲ್ಲಿ 4G ನೆಟ್ವರ್ಕ್ ಸಂಪರ್ಕ ಇರಲಿದೆ ಎಂದು ಟೆಲಿಕಾಂ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಸಚಿವರಾದ ಚೌಹಾಣ್, ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಪ್ರತಿಯೊಬ್ಬರನ್ನು ಹೆಚ್ಚು ಸಾಧಿಸಲು ಪ್ರೇರೇಪಿಸುತ್ತಾರೆ. ಅವರ ‘ಮನ್ ಕಿ ಬಾತ್’ ಸಂಚಿಕೆಗಳು ಕೊನೆಯ ಸ್ತರದಲ್ಲಿರುವ ಜನರಿಗೂ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳನ್ನು ಕೊಂಡೊಯ್ಯಲು ಮತ್ತಷ್ಟು ಪ್ರೇರೇಪಿಸುತ್ತದೆ ಎಂದು ಹೇಳಿದರು.
ನಾವು 4G ಸ್ಯಾಚುರೇಶನ್ ಯೋಜನೆಯ ಬಗ್ಗೆ ಮಾತನಾಡಿದರೆ, ಸುಮಾರು 38,000-40,000 ಹಳ್ಳಿಗಳಲ್ಲಿ ಫೋನ್ ನೆಟ್ ವರ್ಕ್ ಸಿಗ್ನಲ್ ಇಲ್ಲ. ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಆದರೆ ಪ್ರತಿ ಮನೆಗೂ ತಲುಪಿ ಎಂದು ಪ್ರಧಾನಿ ಹೇಳುತ್ತಾರೆ.
ನಾವು 2024 ರ ವೇಳೆಗೆ 4G ಸ್ಯಾಚುರೇಶನ್ ಅನ್ನು ಪೂರ್ಣಗೊಳಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಚೌಹಾಣ್ ಹೇಳಿದರು.
ಭಾನುವಾರ ಪ್ರಸಾರವಾಗಲಿರುವ ‘ಮನ್ ಕಿ ಬಾತ್’ ನ 100ನೇ ಸಂಚಿಕೆಯ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
4ಜಿ ನೆಟ್ವರ್ಕ್ನಿಂದ ಹಳ್ಳಿಗಳಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆ ಮತ್ತು ಡಿಜಿಟಲ್ ಕ್ರಾಂತಿಗೆ ಕಾರಣವಾಗುತ್ತದೆ ಎಂದು ಹೇಳಿದರು.