ಸನಾತನ ಧರ್ಮದ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಅವಶ್ಯಕವಾಗಿ ಇಡಬೇಕು. ಇದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಜೊತೆಗೆ ಸುಖ-ಶಾಂತಿ ನೆಲೆಸಿರುತ್ತದೆ. ಜೊತೆಗೆ ಮನೆಯಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ. ಲೋಹದಿಂದ ಮಾಡಿದ ಸ್ವಸ್ತಿಕ, ಮಣ್ಣಿನ ದೀಪ, ಕಳಶ, ಶಂಖ, ಘಂಟೆಯನ್ನು ದೇವರ ಮನೆಯಲ್ಲಿಡಬೇಕು.ಈ ಸಾಮಗ್ರಿ ಯಾವ ಸ್ಥಳದಲ್ಲಿದೆಯೋ ಆ ಸ್ಥಳ ಪವಿತ್ರ ಹಾಗೂ ಶುದ್ಧವಾಗಿರುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಸಾಸಿವೆ ಎಣ್ಣೆ, ಕುಂಕುಮದ ತಿಲಕವಿಡಿ. ಇದ್ರಿಂದ ಮನೆಯೊಳಗೆ ದುಷ್ಟ ಶಕ್ತಿಯ ಪ್ರವೇಶ ಮಾಡುವುದಿಲ್ಲ. ವಾಸ್ತು ದೋಷ ಕಡಿಮೆಯಾಗಲಿದೆ. ಶನಿದೋಷದಿಂದ ರಕ್ಷಣೆ ಸಿಗಲಿದೆ.
ಮನೆಯ ಅಥವಾ ಕಚೇರಿಯ ಹಣವಿರುವ ಕಪಾಟನ್ನು ಉತ್ತರ ದಿಕ್ಕಿಗೆ ಮುಖ ಮಾಡಿಡಿ. ಇದ್ರಿಂದ ಲಕ್ಷ್ಮಿ ಶಾಶ್ವತವಾಗಿ ನೆಲೆಸಿರುತ್ತಾಳೆ.
ಮಂಗಳವಾರ, ಭಾನುವಾರ ಮತ್ತು ಶನಿವಾರ ಸಗಣಿಯಿಂದ ಮಾಡಿದ ಧೂಪದ ಹೊಗೆಯನ್ನು ಮನೆ ಮತ್ತು ಕಚೇರಿಯ ಎಲ್ಲ ಕೊಠಡಿಗೂ ತೋರಿಸಿ. ಇದ್ರಿಂದ ಕೀಟಗಳು ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಸಿಗುತ್ತದೆ.
ಈಶಾನ್ಯ ಕೋಣೆಯನ್ನು ಸದಾ ಸ್ವಚ್ಛ ಹಾಗೂ ಶುದ್ಧವಾಗಿಡಿ. ಪ್ರತಿದಿನ ಬೆಳಿಗ್ಗೆ ಪೊರಕೆಯಿಂದ ಸ್ವಚ್ಛಗೊಳಿಸಿ. ಸಂಜೆ ಸಮಯದಲ್ಲಿ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಬೇಡಿ.
ಮನೆಯ ಅಗ್ನಿ ಕೋಣೆಯಲ್ಲಿ ನೀರಿನ ಮೂಲವಿರಬಾರದು. ಅಗ್ನಿ ಮೂಲೆಯಲ್ಲಿ ನೀರಿನ ನಲ್ಲಿಯಿದ್ದರೆ ರೋಗ ಹಾಗೂ ಸಾಲ ಹೆಚ್ಚಾಗುತ್ತದೆ. ಇದ್ರಿಂದಾಗುವ ದೋಷ ತಪ್ಪಿಸಿಕೊಳ್ಳಲು ಕೆಂಪು ಬಲ್ಬ್ ಹಾಕಿ. ಯಾವಾಗ್ಲೂ ಅದು ಬೆಳಗುತ್ತಿರುವಂತೆ ನೋಡಿಕೊಳ್ಳಿ.