HomeInternationalಮಹಿಳೆ ಕಿವಿ ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್....!

ಮಹಿಳೆ ಕಿವಿ ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್….!

ತಮ್ಮ ಕಿವಿಯಲ್ಲಿ ಗಂಟೆಯ ಶಬ್ದ ಕೇಳಿಸಿದಂತೆ ಅನುಭವ ಆಗುತ್ತಿದ್ದ ಕಾರಣ ಆಸ್ಪತ್ರೆಗೆ ಭೇಟಿ ಕೊಟ್ಟ ಚೀನಾದ ಮಹಿಳೆಯೊಬ್ಬರಿಗೆ ಭಾರೀ ಶಾಕ್ ಒಂದು ಕಾದಿತ್ತು.

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಮಹಿಳೆಯ ಕಿವಿಯಲ್ಲಿ ಜೇಡವೊಂದು ಮರಿ ಹಾಕಿ ಅವುಗಳನ್ನು ಬೆಳೆಸುತ್ತಿದೆ ಎಂದು ವೈದ್ಯರು ಎಂಡೋಸ್ಕೊಪಿ ತಪಾಸಣೆ ವೇಳೆ ಕಂಡು ಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯ ಕಿವಿಯಲ್ಲಿ ಜೇಡವು ಕಟ್ಟಿದ್ದ ಬಲೆಯನ್ನು ವೈದ್ಯರು ಹೊರತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷ ಕ್ಯಾಮೆರಾವೊಂದರಲ್ಲಿ ಮಹಿಳೆಯ ಕಿವಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವುದನ್ನು ರೆಕಾರ್ಡ್ ಮಾಡಲಾಗಿದೆ.

ಮೊದಲಿಗೆ ಕಿವಿಯ ತಮಟೆಯಂತೆ ಭಾಸವಾಗಿದ್ದು, ಬಳಿಕ ಜೇಡದ ಬಲೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್‌ ಜೇಡವು ವಿಷಪೂರಿತವಲ್ಲದ ಕಾರಣ ಮಹಿಳೆಗೆ ಪ್ರಾಣಾಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular