ಸೂರ್ಯನನ್ನು ಸುತ್ತುವರಿದ ಕಾಮನಬಿಲ್ಲಿನ ಅಸಾಮಾನ್ಯ, ಸುಂದರವಾದ ದೃಶ್ಯ ಕಂಡು ಪ್ರಯಾಗರಾಜ್ನ ಜನರು ಬೆರಗಾಗಿದ್ದಾರೆ. ಈ ಅಪರೂಪದ ವಿದ್ಯಮಾನವು ಕುತೂಹಲಕ್ಕೆ ಕಾರಣವಾಯಿತು. ಹಲವಾರು ಜನರು ತಮ್ಮ ಕ್ಯಾಮರಾಗಳಲ್ಲಿ ಖಗೋಳ ವಿಸ್ಮಯವನ್ನು ಸೆರೆಹಿಡಿದಿದ್ದಾರೆ.
ಹೌದು, ಮಳೆಬಿಲ್ಲುಗಳು ಮಳೆಯ ವಾತಾವರಣದಲ್ಲಿ ಕಾಣಿಸಿಕೊಳ್ಳುವುದು ತುಂಬಾ ಸಾಮಾನ್ಯ. ಆದರೆ, ಸೂರ್ಯನನ್ನು ಸುತ್ತುವರೆದಿರುವ ಈ ಪ್ರಭಾವಲಯವು ಬೇರೆಯೇ ರೀತಿಯಾಗಿತ್ತು. ಪ್ರಯಾಗ್ರಾಜ್ನ ಜನರು ಸೆರೆಹಿಡಿದ ಚಿತ್ರಗಳು ಮತ್ತು ವಿಡಿಯೋಗಳೊಂದಿಗೆ ಟ್ವಿಟರ್ ತುಂಬಿತ್ತು. ದೃಶ್ಯ ನೋಡಿದ ಜನರು ದಿಗ್ಭ್ರಮೆಗೊಂಡರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ರು.
ಪ್ರಕೃತಿ ಅತ್ಯುತ್ತಮ ಕಲಾವಿದ ಎಂದು ಬಳಕೆದಾರರು ಬರೆದಿದ್ದಾರೆ. ಸೂರ್ಯನ ಸುತ್ತಲೂ ಮಳೆಬಿಲ್ಲಿನ ಬಣ್ಣದ ಉಂಗುರ ಕಂಡುಬಂದಿದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.
ಸೂರ್ಯನ ಪ್ರಭಾವಲಯ ಎಂದರೇನು ?
ಪ್ರಭಾವಲಯವು 22 ಡಿಗ್ರಿ ಉಂಗುರವಾಗಿದ್ದು, ಅದು ಬೆಳಕಿನ ಪ್ರಸರಣದಿಂದಾಗಿ ಕಾಣಿಸಿಕೊಳ್ಳುತ್ತದೆ. ಮೇಲಿನ ಹಂತದ ಸಿರಸ್ ಮೋಡಗಳಲ್ಲಿ ಕಂಡುಬರುವ ವಿಶಿಷ್ಟವಾದ ಷಡ್ಭುಜೀಯ ಐಸ್ ಸ್ಫಟಿಕಗಳ ಮೂಲಕ ಬಿಳಿ ಬೆಳಕು ಹಾದುಹೋಗುತ್ತದೆ. ಇದರಿಂದಾಗಿ ಪ್ರಭಾವಲಯವು ಬಣ್ಣಗಳನ್ನು ಹೊಂದಿರುತ್ತದೆ.
ಸೂರ್ಯನ ಬೆಳಕು ಈ ಹರಳುಗಳಿಗೆ ಪ್ರವೇಶಿಸಿದಾಗ, ಅದು ಬಾಗುತ್ತದೆ ಅಥವಾ ವಕ್ರೀಭವನಗೊಳ್ಳುತ್ತದೆ. ಈ ಹಿಂದೆ ಬೆಂಗಳೂರು, ಕೇರಳ ಮತ್ತು ರಾಮೇಶ್ವರಂನಲ್ಲಿಯೂ ಸೂರ್ಯನ ಪ್ರಭಾವಲಯ ಕಾಣಿಸಿಕೊಂಡಿತ್ತು.
https://twitter.com/samrockz07/status/1651837289067347969?ref_src=twsrc%5Etfw%7Ctwcamp%5Etweetembed%7Ctwterm%5E1651837289067347969%7Ctwgr%5E17ba52b5107ea0599b8d9891372ceca30b7deb84%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fmysteriousrainbowringenvelopesthesuninuptwitterisbusytalkingaboutit-newsid-n494556930
https://twitter.com/deepak_gambhir/status/1651864371667283968?ref_src=twsrc%5Etfw%7Ctwcamp%5Etweetembed%7Ctwterm%5E1651864371667283968%7Ctwgr%5E17ba52b5107ea0599b8d9891372ceca30b7deb84%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fmysteriousrainbowringenvelopesthesuninuptwitterisbusytalkingaboutit-newsid-n494556930