ಚೀನಾ: ಒಂದು ಸುಳ್ಳಿನಿಂದ ವ್ಯಕ್ತಿಯೊಬ್ಬ 73 ಲಕ್ಷ ರೂಪಾಯಿ ಜೊತೆಗೆ ಕೆಲಸವನ್ನೂ ಕಳೆದುಕೊಂಡಿದ್ದಾನೆ ಎಂದರೆ ನಂಬುವಿರಾ ? ಹೌದು. ಇದು ಚೀನಾದಲ್ಲಿ ಆಗಿರುವ ಘಟನೆ.
ಚೀನಾದ ವ್ಯಕ್ತಿಯೊಬ್ಬ ಅನಾರೋಗ್ಯ ಕಾರಣ ನೀಡಿ ರಜೆ ಪಡೆದು ಆ ಸಮಯದಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ 620,000 ಯುವಾನ್ (ಸುಮಾರು 73 ಲಕ್ಷ ರೂಪಾಯಿ) ದಂಡ ತೆತ್ತಿದ್ದಾನೆ. ಕ್ಸು ಮೌಮೌ ಎಂಬ ವ್ಯಕ್ತಿ ಈತ. ಈತ ಅನಾರೋಗ್ಯ ರಜೆಯಲ್ಲಿದ್ದಾಗ ದ್ವೀಪದಲ್ಲಿ ವಿಹಾರ ಮಾಡುತ್ತಿದ್ದ. ಅಲ್ಲಿ ದುರದೃಷ್ಟಕ್ಕೆ ಸಹೋದ್ಯೋಗಿ ಭೇಟಿ ಕೊಟ್ಟಿದ್ದ. ಅದನ್ನು ಆತ ಕಚೇರಿಯಲ್ಲಿ ಹೇಳಿದ್ದಾನೆ.
ಈ ಹಿನ್ನೆಲೆಯಲ್ಲಿ ದಂಡ ವಿಧಿಸಿದ್ದೂ ಅಲ್ಲದೇ, ಕೆಲಸದಿಂದ ತೆಗೆದುಹಾಕಲಾಗಿದೆ. ಚೀನಾದಲ್ಲಿ ಈ ರೀತಿಯ ಸುಳ್ಳು ಹೇಳುವುದು ಮಹಾ ಅಪರಾಧ. ಈತ ಎರಡು ವಾರಗಳ ಸಂಬಳದ ರಜೆಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ತಿರಸ್ಕರಿಸಲಾಗಿತ್ತು. ನಂತರ ಅನಾರೋಗ್ಯದ ರಜೆ ಪಡೆದು ಟೂರ್ಗೆ ಹೋಗಿದ್ದ.