ಈ ಹಿಂದೆ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ ಕುರಿತು ಅಂಕಗಳ ಆಧಾರದ ಮೇಲೆ ರಾಂಕಿಂಗ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ನಗರ ಪಾಲಿಕೆಗಳ ವಾರ್ಡ್ ಗಳನ್ನು ಆಕರ್ಷಣೀಯವಾಗಿ ರೂಪಿಸಲು ಮುಂದಾಗಿದೆ.
ಇದಕ್ಕಾಗಿ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯದಿಂದ ‘ನಗರ ಸುಂದರ ಸ್ಪರ್ಧೆ’ಯನ್ನು ಆರಂಭಿಸಲಾಗಿದ್ದು, ನಗರ ಅಥವಾ ವಾರ್ಡ್ಗಳಲ್ಲಿನ ಸಾರ್ವಜನಿಕ ಸ್ಥಳ ಅಭಿವೃದ್ಧಿಪಡಿಸಲು ಇದರಿಂದ ನೆರವಾಗಲಿದೆ ಎಂಬ ಉದ್ದೇಶ ಹೊಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿನ ಸಂಪರ್ಕ ಸೌಕರ್ಯ, ಚಟುವಟಿಕೆ, ಸವಲತ್ತುಗಳ ಲಭ್ಯತೆ, ಪರಿಸರ ಮತ್ತು ಸೌಂದರ್ಯ ಆಧರಿಸಿ ಅಂಕ ನೀಡಲಾಗುತ್ತಿದ್ದು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಯಸುವ ನಗರಗಳ ಹೆಸರನ್ನು ನೋಂದಾಯಿಸಲು ಜುಲೈ 15 ಅಂತಿಮ ದಿನವಾಗಿದೆ.