ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಮದುವೆ ದಿನದ ಸಂತಸದ ಕ್ಷಣಗಳನ್ನು ಸಾಧ್ಯವಾದಷ್ಟು ಹೆಚ್ಚು ಆನಂದಿಸಿ, ಅವುಗಳನ್ನು ಸ್ಮರಣೀಯವಾಗಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು.
ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಮಾರಂಭಗಳ ವಿಡಿಯೋ ತುಣುಕುಗಳು ಬಹಳಷ್ಟು ವೈರಲ್ ಆಗುತ್ತಲೇ ಇರುತ್ತವೆ.
ಇಂಥದ್ದೇ ಒಂದು ವಿಡಿಯೋದಲ್ಲಿ; ಹಸೆಮಣೆ ಏರುವ ಸಂತಸದಲ್ಲಿರುವ ಮದುಮಗ ತನ್ನ ಮನದನ್ನೆಯೊಂದಿಗೆ ಹೆಜ್ಜೆ ಹಾಕುತ್ತಾ ಸಾಗುವುದನ್ನು ನೋಡಬಹುದಾಗಿದೆ. ಭಾರೀ ಉಲ್ಲಾಸದಲ್ಲಿರುವ ಮದುಮಗ ಬೇಗ ಬೇಗ ಹೆಜ್ಜೆ ಇಡಲು ಮದುಮಗಳನ್ನು ಕೇಳುತ್ತಿದ್ದರೆ, ಅತ್ತ ಆಕೆ ಮದುವೆ ದಿನದ ಒಂದೊಂದು ಕ್ಷಣವನ್ನೂ ನಿಧಾನವಾಗಿ ಆಸ್ವಾ ದಿಸುತ್ತಾ ಒಂದೊಂದೇ ಹೆಜ್ಜೆಯನ್ನು ನಿಧಾನವಾಗಿ ಇಡಲು ಬಯಸಿದ್ದಾರೆ.