ಬೆಂಗಳೂರು: ಇಂದು ಮೂರು ಮೂರು ಜಿಲ್ಲೆಗಳಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರವಾಗಿ ಸುದೀಪ್ ಮತಯಾಚಿಸಲಿದ್ದಾರೆ. ನಂತರ ಹಾವೇರಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಪರವಾಗಿ ಪ್ರಚಾರ ನಡೆಸಲಿರುವ ಅವರು ರಾಣೇಬೆನ್ನೂರಿನಲ್ಲಿ ಅರುಣ್ ಪೂಜಾರ್ ಪರ ಪ್ರಚಾರ ನಡೆಸುವರು. ನಂತರ ಸುದೀಪ್ ಬ್ಯಾಡಗಿಯಲ್ಲಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಪರವಾಗಿ ಮತ ಬೇಟೆ ನಡೆಸಲಿದ್ದಾರೆ.
ನಂತರ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಸುದೀಪ್ ರೋಡ್ ಶೋ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ್ ಪರವಾಗಿ ಮತಯಾಚಿಸಲಿದ್ದಾರೆ.