HomeKarnatakaಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿ ಶವ ಪತ್ತೆ

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿ ಶವ ಪತ್ತೆ

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಪೆಡಗಂಟ್ಯಾಡ ಪ್ರದೇಶದ ಈ ಮಹಿಳೆ ಮಂಗಳವಾರ ಸಂಜೆ ತನ್ನ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದರು.

ಬಳಿಕ ಸಮುದ್ರ ದಡದಲ್ಲಿನ ಮರಳಿನಲ್ಲಿ ಹೂತು ಹೋಗಿದ್ದ ಮಹಿಳೆಯ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಾಪತ್ತೆಯಾಗಿದ್ದ ಮಹಿಳೆ ಈಕೆಯೇ ಎಂದು ಪೊಲೀಸರು ದೃಢಪಡಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯ ಪತಿ ಸಾಫ್ಟ್ವೇರ್ ಇಂಜಿನಿಯರ್ ಎನ್ನಲಾಗಿದ್ದು, ತನ್ನ ಅತ್ತೆಯೊಂದಿಗೆ ಜಗಳವಾಡಿಕೊಂಡ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಇದೀಗ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ಕಳುಹಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular