ಪ್ರಪಂಚ ತುಂಬಾ ವಿಚಿತ್ರವಾದ ಸಂಗತಿಗಳಿಂದ ತುಂಬಿದೆ. ಹಲವಾರು ಬಾರಿ ಆಘಾತಕಾರಿ ಸಂಗತಿಗಳನ್ನು ಕೇಳಿದ ನಂತರವೂ ಇದು ಸಂಭವಿಸುತ್ತಿತ್ತು ಎಂದು ನಂಬಲು ಸಾಧ್ಯವಾಗುವುದಿಲ್ಲ.
ಯುರೋಪ್ ದೇಶದಲ್ಲಿರುವ ವಿಚಿತ್ರ ಹಳ್ಳವೊಂದರಲ್ಲಿ ಕೂಡ ಇಂಥದ್ದೇ ಅಚ್ಚರಿಯ ರಹಸ್ಯ ಅಡಗಿದೆ. ಈ ಹೊಂಡವನ್ನು ಇತರ ಪ್ರಪಂಚದ ಬಾಗಿಲು ಎಂದು ಕರೆಯಲಾಗುತ್ತದೆ.
ಈ ಹೊಂಡದಲ್ಲಿ ಇಳಿದರೆ ಸಾಕು ಮನುಷ್ಯರು ಮುದುಕರಾಗಿ ವಾಪಸ್ಸಾಗುತ್ತಿದ್ದರು. ಈ ವಿಸ್ಮಯಕಾರಿ ಘಟನೆಗಳ ಬಳಿಕ ಗುಂಡಿಯನ್ನೇ ಮುಚ್ಚಲಾಯ್ತು. ವಾಸ್ತವವಾಗಿ ಈ ಹಳ್ಳ ಇರೋದು ಯುರೋಪ್‌ನ ಜೆಕ್ ಗಣರಾಜ್ಯದಲ್ಲಿ. ವರದಿಗಳ ಪ್ರಕಾರ ಈ ಹಳ್ಳದಲ್ಲಿ ಇಳಿದರೆ ಜನರು ಕಣ್ಮರೆಯಾಗುತ್ತಿದ್ದರಂತೆ. ನಂತರ ವೃದ್ಧರಾಗಿ ಹೊರಬರುತ್ತಿದ್ದರು. ಇದರರ್ಥ ಮನುಷ್ಯರು ಪ್ರವೇಶಿಸಿದ ತಕ್ಷಣ ಕಣ್ಮರೆಯಾಗುತ್ತಾರೆ ಮತ್ತು ಬಹಳ ಸಮಯದ ನಂತರ ಹೊರಬರುತ್ತಾರೆ.
ಸುಮಾರು 13 ನೇ ಶತಮಾನದಲ್ಲಿ ಈ ಹೊಂಡವನ್ನು ಮುಚ್ಚಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆದರೆ ಸ್ವಲ್ಪ ಸಮಯದ ನಂತರ ಇದನ್ನು ಮತ್ತೆ ತೆರೆಯಲಾಯ್ತು. ಈ ಹಳ್ಳವನ್ನು ನರಕದ ದ್ವಾರ ಎಂದೂ ಕರೆಯುತ್ತಾರೆ. ಈ ಹೊಂಡದ ಆಳವನ್ನು ಇಲ್ಲಿಯವರೆಗೂ ಅಳತೆ ಮಾಡಿಲ್ಲ ಎನ್ನಲಾಗಿದೆ. ಇಲ್ಲಿ ಕೋಟೆಯ ನಿರ್ಮಾಣದ ಮೊದಲು, ಕೈದಿಗಳನ್ನು ಹಳ್ಳಕ್ಕೆ ತಳ್ಳುವ ಮೂಲಕ ಶಿಕ್ಷಿಸಲಾಗುತ್ತಿತ್ತು.
ಹಳ್ಳದಲ್ಲಿ ಬಿದ್ದ ಕೈದಿಗಳು ಸಾಯುತ್ತಿದ್ದರು. ಅಚ್ಚರಿಯ ಸಂಗತಿ ಎಂದರೆ ಒಮ್ಮೆ ಕೈದಿಯೊಬ್ಬ ತಪ್ಪಿಸಿಕೊಂಡು ಹೊರಗೆ ಬಂದಿದ್ದ.ಆದರೆ ವಿಶೇಷವೆಂದರೆ ಆ ವ್ಯಕ್ತಿ ಹೊರಗೆ ಬರುವಷ್ಟರಲ್ಲಿ ಮುದುಕನಾಗಿದ್ದ. ಅಂದಿನಿಂದ ಇಲ್ಲಿ ಇಂತಹ ವಿಸ್ಮಯ ಜರುಗುತ್ತದೆ ಎಂಬುದು ಜಗಜ್ಜಾಹೀರಾಗಿತ್ತು. ಮತ್ತೆ ಇಂತಹ ಘಟನೆಗಳು ಹೆಚ್ಚಾಗತೊಡಗಿದಾಗ ಈ ಹೊಂಡವನ್ನು ಮುಚ್ಚಲಾಯಿತು.