BIG NEWS: ಮುಸ್ಲಿಂರ 2B ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಬೆಂಗಳೂರು: ಮುಸ್ಲಿಂ ಸಮುದಾಯದ 2B ಮೀಸಲಾತಿ ರದ್ದು ಮಾಡಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

2B ಮೀಸಲಾತಿ ಪಡೆದಿದ್ದ ಮುಸ್ಲಿಂರಿಗೆ ಮೀಸಲಾತಿ ರದ್ದು ಪಡಿಸಲು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಸರ್ಕಾರದ ಆದೆಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಪೀಠ ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕರಣೆ ದೋಷ ಪೂರಿತವಾಗಿದೆ ಶೇ.4ರಷ್ಟು ಮೀಸಲಾತಿ ರದ್ದು ಮೇಲ್ನೋಟಕ್ಕೆ ಊಹಾಪೋಹ ರೀತಿಯಿದೆ. ಮುಸ್ಲಿಂ ಸಮುದಾಯದ ಶೇ.4ರಷ್ಟು ಮೀಸಲಾತಿ ರದ್ದು ಹಾಗೂ ಒಕ್ಕಲಿಗ, ಲಿಂಗಾಯಿತ ಮೀಸಲಾತಿ ಹೆಚ್ಚಳ ದೋಷಪೂರಿತವಾಗಿದೆ ಮುಂದಿನ ವಿಚಾರಣೆವರೆಗೆ ಮೀಸಲಾತಿ ರದ್ದು ಆಧಾರದ ಮೇಲೆ ದಾಖಲಾತಿ, ನೇಮಕಾತಿ ಮಾಡಬಾರದು ಎಂದು ಏ.13ರಂದು ಆದೇಶ ನೀಡಿತ್ತು.

ಇಂದು ಕೂಡ ವಿಚಾರಣೆ ನಡೆಸಿದ ಸುಪ್ರೀಂ ದ್ವಿಸದಸ್ಯಪೀಠ ತನ್ನ ಹಿಂದಿನ ಆದೇಶವನ್ನು ಮುಂದುವರೆಸುವಂತೆ ಸೂಚಿಸಿದೆ. ಮುಸ್ಲಿಂ ಸಮುದಾಯಕ್ಕೆ 2B ಮೀಸಲಾತಿ ರದ್ದು ಆದೇಶಕ್ಕೆ ತಡೆ ಮುಂದುವರೆಸಿದ್ದು ಮುಂದಿನ ವಿಚಾರಣೆ ಮೇ 9ರಂದು ಮುಂದೂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read