ಜೆಮಿನಿ ಮತ್ತು ಜಂಬೋ ಸರ್ಕಸ್ ಕಂಪನಿಗಳ ಸಂಸ್ಥಾಪಕ ಎಂ.ವಿ. ಶಂಕರನ್ ಅಲಿಯಾಸ್ ಜೆಮಿನಿ ಶಂಕರನ್ ವಿಧಿವಶರಾಗಿದ್ದಾರೆ. 99 ವರ್ಷದ ಶಂಕರನ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಸೋಮವಾರದಂದು ಇಹಲೋಕ ತ್ಯಜಿಸಿದ್ದಾರೆ.
ಸರ್ಕಸ್ ಕಲಾವಿದರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ವಿಜಯ ಸರ್ಕಸ್ ಕಂಪನಿಯನ್ನು ಸ್ನೇಹಿತರ ಜೊತೆ ಸೇರಿ ಸುಪರ್ದಿಗೆ ಪಡೆದುಕೊಂಡ ಬಳಿಕ ಜೆಮಿನಿ ಸರ್ಕಸ್ ಎಂದು ಇದರ ಹೆಸರನ್ನು ಬದಲಾಯಿಸಿದ್ದರು.
ವಿದೇಶಿ ಕಲಾವಿದರನ್ನು, ಪ್ರಾಣಿ ಪಕ್ಷಗಳನ್ನು ಜೆಮಿನಿ ಸರ್ಕಸ್ ಗೆ ಸೇರ್ಪಡೆ ಮಾಡಿಕೊಂಡ ಅವರು ಇದರ ಖ್ಯಾತಿಯನ್ನು ಉತ್ತಂಗಕ್ಕೆ ಏರಿಸಿದ್ದರು. ಅಲ್ಲದೆ ಇದರ ಜೊತೆಗೆ ಜಂಬೋ ಸರ್ಕಸ್ ಕಂಪನಿಯನ್ನು ಸಹ ಶಂಕರನ್ ತಮ್ಮದಾಗಿಸಿಕೊಂಡಿದ್ದರು.