HomeKarnatakaBIG NEWS: ಡಿ.ಕೆ. ಶಿವಕುಮಾರ್ ಆರೋಪಕ್ಕೆ ಸಿಎಂ ಕಿಡಿ; ಕಾಂಗ್ರೆಸ್ ನವರಿಗೆ ಬೇರೆ ಕೆಲಸವಿಲ್ಲ ಎಂದು...

BIG NEWS: ಡಿ.ಕೆ. ಶಿವಕುಮಾರ್ ಆರೋಪಕ್ಕೆ ಸಿಎಂ ಕಿಡಿ; ಕಾಂಗ್ರೆಸ್ ನವರಿಗೆ ಬೇರೆ ಕೆಲಸವಿಲ್ಲ ಎಂದು ತಿರುಗೇಟು

ಬೆಂಗಳೂರು: ಸಿಎಂ ಕಚೇರಿಯಿಂದಲೇ ಅಧಿಕಾರ ದುರಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬೇರೇನೂ ಕೆಲಸವಿಲ್ಲ, ಬರಿ ಇಂತದ್ದೇ ಆರೋಪ ಮಾಡುತ್ತಾ ಕೂರುವುದೇ ಕೆಲಸ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಖುದ್ದು ಸಿಎಂ ಕಚೇರಿಯಿಂದಲೇ ಯತ್ನ ನಡೆದಿದೆ. ಸಿಎಂ ಸೂಚನೆ ಮೇರೆಗೆ ಇದೆಲ್ಲವೂ ನಡೆದಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಡಿ.ಕೆ. ಶಿವಕುಮಾರ್ ನಾಮಪತ್ರ ತಿರಸ್ಕೃತವೇನಾದ್ರೂ ಆಗಿದ್ಯಾ? ಇಲ್ಲ. ಅಂದಮೇಲೆ ನಾವು ಅಂತಹ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಅದೇ ಸಾಕ್ಷಿ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ನಾಮಪತ್ರದಲ್ಲಿ ನಾವು ಭಾಗಿಯಾಗಲ್ಲ. ಕಾಂಗ್ರೆಸ್ ನವರಿಗೆ ಬೇರೆನೂ ಕೆಲಸವಿಲ್ಲ, ಬರಿ ಇಂಥದ್ದೇ ಮಾಡಿಕೊಂಡು ಕೂರುವುದೇ ಅವರ ಕೆಲಸ. ಇಂತಹ ಆರೋಪಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular