ಮೆಟಾ-ಮಾಲೀಕತ್ವದ ಜನಪ್ರಿಯ ಮೇಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ಬಳಕೆದಾರರಿಗೆ ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್ ಡಿಲಿಟ್ ಮಾಡದೇ ಸಂಪರ್ಕಗಳನ್ನು ಎಡಿಟ್ ಮಾಡಲು ಮತ್ತು ಸಂಪಾದಿಸಲು ಅನುವು ಮಾಡಿಕೊಡುವುದು ಈ ಹೊಸ ಫೀಚರ್‌ನ ವಿಶೇಷವಾಗಿದೆ.
ವಾಟ್ಸಾಪ್ ನಲ್ಲಿ ಸಂಪರ್ಕ ಪಟ್ಟಿಯನ್ನು ಓಪನ್ ಮಾಡುವುದರ ಮೂಲಕ ಮತ್ತು “ಹೊಸ ಸಂಪರ್ಕ” ಆಯ್ಕೆಯನ್ನು ಸೆಲೆಕ್ಟ್ ಮಾಡುವುದರ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಪೋನ್‌ಗಳಲ್ಲಿ ಈ ವೈಶಿಷ್ಟ್ಯದ ಲಭ್ಯತೆಯನ್ನು ಪರಿಶೀಲಿಸಬಹುದು ಎಂದು ವಾಟ್ಸಾಪ್ ತಿಳಿಸಿದೆ.
“ಹೊಸ ಸಂಪರ್ಕ” ಆಯ್ಕೆಯು ಲಭ್ಯವಿದ್ದರೆ, ಇದರರ್ಥ ವೈಶಿಷ್ಟ್ಯವು ಲಭ್ಯವಿದೆ ಎಂಬುದಾಗಿದೆ. ಇದರ ಜೊತೆಗೆ ಅವರು ವಾಟ್ಸಾಪ್ ಅನ್ನು ಡಿಲಿಟ್ ಮಾಡದೆಯೇ ತಮ್ಮ ಸಂಪರ್ಕಗಳನ್ನು ಸೇರಿಸಬಹುದು.
ಇದಲ್ಲದೆ, ಬಳಕೆದಾರರು ವಾಟ್ಸಾಪ್‌ನಲ್ಲಿ ಇತರರನ್ನು ಕಾಂಟಾಕ್ಟ್ ಮಾಡಿದಾಗ ಸಂಪರ್ಕಗಳ ಅಪ್ಲಿಕೇಶನ್‌ಗೆ ಅದನ್ನು ಬದಲಾಯಿಸದೆ ತಮ್ಮ ಸಂಪರ್ಕಗಳ ಪಟ್ಟಿಗೆ ಅಪರಿಚಿತ ಸಂಖ್ಯೆಗಳನ್ನು ಸೇರಿಸಬಹುದು ಎಂದು ವರದಿ ಹೇಳಿದೆ.