ನಿಸರ್ಗ ಸೌಂದರ್ಯದ ಸುಂದರ ‘ಗಿರಿಧಾಮ’ ಜೋಗಿಮಟ್ಟಿ

ಚಿತ್ರದುರ್ಗದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿ ಜೋಗಿಮಟ್ಟಿ ಗಿರಿಧಾಮವಿದ್ದು, ಇಲ್ಲಿನ ನಿಸರ್ಗ ಸೌಂದರ್ಯ, ತಂಪಾದ ಹವಾಮಾನ ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗನ್ನು ನೆನಪಿಸುತ್ತದೆ.

ಜೋಗಿಮಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಆಡುಮಲ್ಲೇಶ್ವರ ಬಾಲವನ, ಅರಣ್ಯ ಇಲಾಖೆಯ ಮೃಗಾಲಯ, ಬಸವನ ಬಾಯಿಯಿಂದ ನೀರು ಬರುವ ಹಿಮವತ್ ಕೇದಾರ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಇವೆ. ಜೋಗಿಮಟ್ಟಿಯಲ್ಲಿ ಮಲೆನಾಡಿನ ಪರಿಸರವನ್ನು ಕಾಣಬಹುದಾಗಿದೆ. ಸುಂದರವಾದ ಬೆಟ್ಟದಲ್ಲಿ ಸುತ್ತಾಡುವುದೇ ಚೆಂದದ ಅನುಭವ. ಇಲ್ಲಿ ಅರಣ್ಯ ಇಲಾಖೆಯ ಅತಿಥಿ ಗೃಹ ಇದ್ದು, ಇಲ್ಲಿ ತಂಗಲು ಚಿತ್ರದುರ್ಗದಲ್ಲಿರುವ ಅರಣ್ಯ ಇಲಾಖೆ ಕಚೇರಿಯಿಂದ ಅನುಮತಿ ಪಡೆದುಕೊಳ್ಳಬೇಕು.

ಜಿಲ್ಲಾ ಕೇಂದ್ರವಾಗಿರುವ ಚಿತ್ರದುರ್ಗದಲ್ಲಿ ಉಳಿಯಲು ವ್ಯವಸ್ಥೆ ಇದೆ. ರಾಜ್ಯದ ಎಲ್ಲಾ ಕಡೆಗಳಿಂದಲೂ ಚಿತ್ರದುರ್ಗಕ್ಕೆ ಸಂಪರ್ಕ ವ್ಯವಸ್ಥೆ ಇದೆ. ನೀವು ಸಾಧ್ಯವಾದರೆ ಒಮ್ಮೆ ಹೋಗಿ ಬನ್ನಿ. ಬಯಲು ಸೀಮೆಯಲ್ಲಿರುವ ಮಲೆನಾಡಿನ ಗಿರಿಧಾಮವನ್ನು, ನಿಸರ್ಗದ ಚೆಲುವನ್ನು ಕಣ್ತುಂಬಿಕೊಳ್ಳಿರಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read