HomeKarnatakaBIG NEWS: ಬಿ.ಎಲ್. ಸಂತೋಷ್ ವಿರುದ್ಧ ಶೆಟ್ಟರ್ ನೇರ ಆರೋಪ; ಅವರಿಂದಲೇ ನನಗೆ ಟಿಕೆಟ್ ತಪ್ಪಿದ್ದು...

BIG NEWS: ಬಿ.ಎಲ್. ಸಂತೋಷ್ ವಿರುದ್ಧ ಶೆಟ್ಟರ್ ನೇರ ಆರೋಪ; ಅವರಿಂದಲೇ ನನಗೆ ಟಿಕೆಟ್ ತಪ್ಪಿದ್ದು ಎಂದು ಆಕ್ರೋಶ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ್ದು, ಅದರಲ್ಲಿ ತಮಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ನನ್ನ ವಿರುದ್ಧ ಬಿ.ಎಲ್. ಸಂತೋಷ್ ಷಡ್ಯಂತ್ರ ರೂಪಿಸಿದ್ದು, ಹಲವರು ಅವರ ಜೊತೆ ಕೈಜೋಡಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ತಮ್ಮ ಮಾನಸ ಪುತ್ರನ ಸಲುವಾಗಿ ಇಷ್ಟೆಲ್ಲ ಮಾಡಿದ್ದಾರೆ ಎಂದು ಹೇಳಿದರು. ಆದರೆ ಆ ಮಾನಸ ಪುತ್ರ ಯಾರು ಎಂದು ಶೆಟ್ಟರ್ ಬಹಿರಂಗಪಡಿಸಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರು ತಿಂಗಳಿನಿಂದಲೇ ನನ್ನ ಕ್ಷೇತ್ರದಲ್ಲಿ ವಿಸ್ಪರ್ರಿಂಗ್ ಕ್ಯಾಂಪ್ ನಡೆಯುತ್ತಿತ್ತು. ನಾನು ಈ ವಿಚಾರವನ್ನು ಕೋರ್ ಕಮಿಟಿಯಲ್ಲಿಯೇ ಹೇಳಿದ್ದರೂ ಸಹ ಯಾರೂ ಕಿವಿಗೊಡಲಿಲ್ಲ. ಹೀಗಾಗಿ ನಾನು ಅವಮಾನ ಸಹಿಸಿಕೊಳ್ಳಲಾರದೆ ಪಕ್ಷದಿಂದ ಹೊರಬರಬೇಕಾಯಿತು ಎಂದು ಶೆಟ್ಟರ್ ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular