ದಿನೇ ದಿನೇ ಚಿನ್ನದ ದರ ಏರ್ತಿದ್ದು ಮಧ್ಯಮ ವರ್ಗದ ಕುಟುಂಬಗಳಿಗೆ ಹಳದಿ ಲೋಹ ಗಗನಕುಸುಮವಾಗ್ತಿದೆ. ಏಪ್ರಿಲ್ 17ರಂದು ಚಿನ್ನದ ದರ ಏರಿದ್ದು, ಬೆಳ್ಳಿ ದರ ಕೊಂಚ ಕಡಿಮೆಯಾಗಿದೆ.
ಗುಡ್ ರಿಟರ್ನ್ಸ್ ಪ್ರಕಾರ ಏಪ್ರಿಲ್ 17 ರಂದು ಚಿನ್ನದ ಬೆಲೆ 10 ಗ್ರಾಂಗೆ (22 ಕ್ಯಾರೆಟ್) 55,940 ಮತ್ತು ಬೆಳ್ಳಿ ಕೆಜಿಗೆ 78,500 ರೂ. ಇದೆ.
ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನ 55,940 ರೂ. ಮತ್ತು 24 ಕ್ಯಾರೆಟ್ ಚಿನ್ನ 61,030 ರೂಪಾಯಿ ಇದೆ.
ದೆಹಲಿ, ಬೆಂಗಳೂರು ಮತ್ತು ಚೆನ್ನೈನಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನವು ಕ್ರಮವಾಗಿ ರೂ. 56,090, ರೂ. 55,990 ಮತ್ತು ರೂ. 56,500 ಆಗಿದೆ.
ದೆಹಲಿ, ಬೆಂಗಳೂರು ಮತ್ತು ಚೆನ್ನೈನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನವು ಕ್ರಮವಾಗಿ ರೂ. 61,180, ರೂ. 61,080 ಮತ್ತು ರೂ. 61,640 ಆಗಿದೆ.
ಬೆಳ್ಳಿ ಬೆಲೆ ಎಷ್ಟು?
ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ 1 ಕೆ.ಜಿ. ಬೆಳ್ಳಿಯ ಬೆಲೆ 78,500 ರೂ.
ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ 1 ಕೆ.ಜಿ. ಬೆಳ್ಳಿಯ ಬೆಲೆ 81,600 ರೂ.