HomeKarnatakaBIG NEWS: ಅಂದು ಬಿಜೆಪಿಯನ್ನು ಮುಳುಗಿಸಿದ ಕೀರ್ತಿ ಯಡಿಯೂರಪ್ಪನವರಿಗೂ ಸಲ್ಲುತ್ತೆ; ಟಾಂಗ್ ನೀಡಿದ ಮಾಜಿ ಡಿಸಿಎಂ

BIG NEWS: ಅಂದು ಬಿಜೆಪಿಯನ್ನು ಮುಳುಗಿಸಿದ ಕೀರ್ತಿ ಯಡಿಯೂರಪ್ಪನವರಿಗೂ ಸಲ್ಲುತ್ತೆ; ಟಾಂಗ್ ನೀಡಿದ ಮಾಜಿ ಡಿಸಿಎಂ

ಬೆಳಗಾವಿ: ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಏನು ಕಡಿಮೆ ಮಾಡಿತ್ತು? ಎಲ್ಲಾ ಸ್ಥಾನಮಾನ ಕೊಟ್ಟಿದ್ದರೂ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ತಪ್ಪು ಮಾಡಿದ್ದಾರೆ ಎಂಬ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಯಡಿಯೂರಪ್ಪನವರಿಗೆ ಬೇರೆಯವರನ್ನು ಟೀಕಿಸುವ ಹಕ್ಕಿಲ್ಲ ಎಂದಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಯಡಿಯೂರಪ್ಪನವರಿಗೆ ಬಿಜೆಪಿಯಲ್ಲಿ ಎಲ್ಲಾ ಸ್ಥಾನಮಾನ ನಿಡಲಾಗಿತ್ತು, ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಗಿತ್ತು. ಆದರೂ ಅವರು ಯಾಕೆ ಅಂದು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದರು ? ಆ ಸಂದರ್ಭದಲ್ಲಿ ಬಿಜೆಪಿ ಮುಳುಗಿಸಿದ ಹೆಸರು ಯಡಿಯೂರಪ್ಪನವರಿಗೆ ಸಲ್ಲುತ್ತೆ ಎಂದು ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಡಿಯೂರಪ್ಪನವರು ಬೇರೆಯವರನ್ನು ಟೀಕಿಸುವ ಮೊದಲು ಸ್ವಲ್ಪ ತಮ್ಮ ಹಿಂದಿನ ವಿಚಾರ ಮೆಲುಕು ಹಾಕಬೇಕು. ತಮಗೂ ಪಕ್ಷ ಎಲ್ಲಾ ಜವಾಬ್ದಾರಿಗಳನ್ನು ಕೊಟ್ಟಿದ್ದರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು ಹಾಗಾಗಿ ಅವರು ನನ್ನ ಹಾಗೂ ಶೆಟ್ಟರ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಯಡಿಯೂರಪ್ಪ ಗೌರವಾನ್ವಿತ ವ್ಯಕ್ತಿ. ಅವರ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ. ಈಗ ನಾನು ಆ ಪಕ್ಷದಲ್ಲಿ ಇಲ್ಲ ಹಾಗಾಗಿ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯಿಸಲ್ಲ. ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular