![](https://kannadadunia.com/wp-content/uploads/2023/04/eda60075-0d36-4b35-8ad9-9648464356cb.jpg)
ಮರ್ಯಾದೆಗೇಡು ಹತ್ಯೆಯ ಶಂಕಿತ ಪ್ರಕರಣದಲ್ಲಿ ಬಿಹಾರದ ಹಾಜಿಪುರದಲ್ಲಿ ದಂಪತಿಗಳು ತಮ್ಮ 18 ಮತ್ತು 16 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದಾರೆ. ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಅವರನ್ನು ಕೊಂದಿರುವುದಾಗಿ ತಾಯಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ಅಪರಾಧ ಸ್ಥಳಕ್ಕೆ ಬಂದಾಗ ಎರಡು ಶವಗಳ ಬಳಿ ತಾಯಿ ರಿಂಕು ದೇವಿ ಕುಳಿತಿದ್ದರು. ಪರಾರಿಯಾಗಿರುವ ಪತಿ ನರೇಶ್ ಬೈತಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸರು ತಾಯಿಯನ್ನು ವಿಚಾರಿಸಿದಾಗ ಇಬ್ಬರೂ ಹುಡುಗಿಯರು ಬೇರೆ ಬೇರೆ ಜಾತಿಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ತಿಳಿಸಿದ್ದಾರೆ. ಆಗಾಗ ಪಾಲಕರಿಗೆ ತಿಳಿಸದೆ ಮನೆ ಬಿಟ್ಟು ಹೋಗುತ್ತಿದ್ದ ಬಾಲಕಿಯರನ್ನು ಕೊಂದಿರುವುದಾಗಿ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ತಂದೆ-ತಾಯಿ ಇಬ್ಬರೂ ಕೊಲೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹುಡುಗಿಯರನ್ನು ತಂದೆಯೇ ಕೊಲೆ ಮಾಡಿದ್ದಾರೆ ಎಂದು ತಾಯಿ ಆರಂಭದಲ್ಲಿ ಹೇಳಿದ್ದರು. ಆದರೆ ತನಿಖೆಯ ನಂತರ, ಪೋಷಕರಿಬ್ಬರೂ ಸೇರಿ ಹುಡುಗಿಯರನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಸದರ್) ಓಂ ಪ್ರಕಾಶ್ ಮಾಧ್ಯಮಗಳಿಗೆ ತಿಳಿಸಿದರು.