Shocking Video | ಕಾರ್ ತಪಾಸಣೆ; ಬಾನೆಟ್ ಮೇಲಿದ್ದ ಪೊಲೀಸ್ ಎಳೆದೊಯ್ದ ಚಾಲಕ

ಕಾರಿನ ಬಾನೆಟ್ ಮೇಲಿದ್ದ 37 ವರ್ಷದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನ ಡ್ರಗ್ ಸೇವಿಸಿದ್ದ ಕಾರ್ ಚಾಲಕ 20 ಕಿಲೋಮೀಟರ್ ವರೆಗೆ ಎಳೆದೊಯ್ದಿರೋ ಆಘಾತಕಾರಿ ಘಟನೆ ನವಿ ಮುಂಬೈನಲ್ಲಿ ನಡೆದಿದೆ.

ಚಾಲಕ ಡ್ರಗ್ಸ್ ಸೇವಿಸಿದ್ದಾನೆ ಎಂಬ ಶಂಕೆಯಿಂದ ಆತನನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಈ ಘಟನೆ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 1:30ರ ಸುಮಾರಿಗೆ ಟ್ರಾಫಿಕ್ ಪೋಲೀಸ್ ಸಿದ್ದೇಶ್ವರ ಮಾಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದರು.

ಡ್ರಗ್ ಸೇವನೆ ಅನುಮಾನದ ಮೇಲೆ ಮತ್ತೊಬ್ಬ ಟ್ರಾಫಿಕ್ ಪೊಲೀಸ್‌ನೊಂದಿಗೆ ಕೋಪರ್‌ಖೈರಾನೆ-ವಾಶಿ ಲೇನ್‌ನಲ್ಲಿ ತಪಾಸಣೆಗಾಗಿ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಸಿದ್ದೇಶ್ವರ ಮಾಲಿಯನ್ನು ಎಳೆದೊಯ್ಯಲಾಗಿದೆ ಎಂದು ವಾಶಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಾಲಕನನ್ನು 22 ವರ್ಷದ ಆದಿತ್ಯ ಬೆಂಬ್ಡೆ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಿ ಕೊಲೆ ಯತ್ನದ ಆರೋಪದ ಮೇಲೆ ಮತ್ತು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯ ನಿಬಂಧನೆಗಳ ಮೇಲೆ ಕೇಸ್ ದಾಖಲಿಸಲಾಗಿದೆ. ಕಾರ್ ಚಾಲಕನು ಸಿದ್ದೇಶ್ವರ ಮಾಲಿ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿದನು. ಇದರ ಪರಿಣಾಮವಾಗಿ ಪೊಲೀಸರು ವಾಹನದ ಬಾನೆಟ್ ಮೇಲೆ ಹತ್ತಿದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.

ಆರೋಪಿ ಕಾರ್ ನಿಲ್ಲಿಸುವ ಬದಲು ಸ್ಥಳದಿಂದ ಸುಮಾರು 20 ಕಿಮೀ ದೂರದಲ್ಲಿರುವ ಗವ್ಹಾನ್ ಫಾಟಾದವರೆಗೆ ಕಾರ್ ಚಲಾಯಿಸಿದನು. ಹಲವಾರು ಕಿಲೋಮೀಟರ್‌ ದೂರ ಎಳೆದೊಯ್ದ ನಂತರ, ಟ್ರಾಫಿಕ್ ಪೋಲೀಸ್ ವಾಹನದಿಂದ ಬಿದ್ದಿದ್ದಾರೆ. ನಂತರ ಕೆಲವು ಪೊಲೀಸರು ಕಾರು ಚಾಲಕನನ್ನು ಹಿಂಬಾಲಿಸಿ ಆತನನ್ನು ಹಿಡಿದಿದ್ದಾರೆ.

ವೈದ್ಯಕೀಯ ತಪಾಸಣೆಯಲ್ಲಿ ಆತ ಡ್ರಗ್ಸ್ ಸೇವಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

https://twitter.com/dailyreported/status/1647309959099711488?ref_src=twsrc%5Etfw%7Ctwcamp%5Etweetembed%7Ctwterm%5E1647309959099711488%7Ctwgr%5Ee58f4954c78d0b2587cbd9fdb57b9a9fc5fae9f3%7Ctwcon%5Es1_&ref_url=https%3A%2F%2Fwww.news18.com%2Findia%2Fcaught-on-cam-traffic-cop-dragged-atop-cars-bonnet-for-20-km-in-navi-mumbai-driver-high-on-drugs-7560487.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read