ಟೆಕ್ ಉದ್ಯಮದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಉದ್ಯೋಗಿಗಳನ್ನು ಕೈಬಿಟ್ಟಿದೆ. ಅನೇಕ ಉನ್ನತ ಕಂಪನಿಗಳು ಹಲವಾರು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ. ಈ ಉದ್ಯೋಗ ವಜಾಗಳ ನಡುವೆ, ಮೆಟಾ ಮತ್ತು ಸೇಲ್ಸ್‌ಫೋರ್ಸ್‌ನಂತಹ ಕಂಪನಿಗಳಲ್ಲಿ ಉದ್ಯೋಗಿಗಳು ಯಾವುದೇ ಅರ್ಥಪೂರ್ಣ ಕೆಲಸವನ್ನು ನಿಯೋಜಿಸದೆ ವೇತನವನ್ನು ಪಡೆಯುತ್ತಿದ್ದಾರೆ ಎಂಬ ವರದಿಗಳು ಹೊರಹೊಮ್ಮಿವೆ.
ಏನೂ ಕೆಲಸ ಮಾಡದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕೋಟಿ-ಕೋಟಿ ದುಡ್ಡಿದ್ದರೆ.. ಅಬ್ಬಾ ಕಲ್ಪಿಸಿಕೊಳ್ಳುವುದೂ ಅಸಾಧ್ಯ ಅಲ್ಲವೇ? ಇದು ಅನೇಕರಿಗೆ ಕನಸಿನಂತೆ ತೋರುತ್ತದೆ. ಆದರೆ, ಮೆಟಾ ಮಾಜಿ ಉದ್ಯೋಗಿಯೊಬ್ಬರು ಏನೂ ಕೆಲಸ ಮಾಡದೆ 1.5 ಕೋಟಿ ರೂ. ಪಡೆದಿದ್ದಾಗಿ ಹೇಳಿದ್ದಾರೆ.
ಟಿಕ್‌ಟಾಕ್ ವಿಡಿಯೋವನ್ನು ಉಲ್ಲೇಖಿಸಿರುವ ದಿ ಇಂಡಿಪೆಂಡೆಂಟ್ ಪ್ರಕಾರ, ಏನೂ ಮಾಡದಿದ್ದಕ್ಕಾಗಿ ಕಂಪನಿಯಲ್ಲಿ ತನಗೆ ಡಾಲರ್ 190k (ರೂ. 1.5 ಕೋಟಿ) ಪಾವತಿಸಲಾಗಿದೆ ಎಂದು ಮಾಜಿ ಮೆಟಾ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಮೇಡ್‌ಲೈನ್ ಮಚಾಡೊ ಎಂಬ ನೇಮಕಾತಿದಾರರು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ರು. 2021 ರಲ್ಲಿ ಅವರ ಆರು ತಿಂಗಳ ಅವಧಿಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಟಿಕ್‌ಟಾಕ್ ವಿಡಿಯೋದಲ್ಲಿ ಮೆಟಾದಲ್ಲಿ ನೇಮಕಾತಿ ಮಾಡುವ ಆರು ತಿಂಗಳ ಅವಧಿಯಲ್ಲಿ ಏನನ್ನೂ ಕೆಲಸ ಮಾಡದಿರಲು ಡಾಲರ್ 190k ಪಾವತಿಸಲಾಗಿದೆ ಎಂದು ಮಚಾಡೊ ಹೇಳಿದ್ರು. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮೂಲ ಕಂಪನಿ ಮೆಟಾದಲ್ಲಿ ಕೆಲಸ ಮಾಡುವಾಗ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು. ಮೆಟಾ ಕಂಪನಿಯ ಸಭೆಗಳನ್ನು ಟೀಕಿಸಿದ ಅವರು, ಕಂಪನಿಯು ಅವರ ನಿರೀಕ್ಷೆಗಳಿಗೆ ತಕ್ಕಂತೆ ಬದುಕಿದೆ ಎಂದು ಹೇಳಿದ್ರು.
ಏನೂ ಕೆಲಸ ಮಾಡದೆ ತನಗೆ ಅಷ್ಟೊಂದು ಹಣ ಬಂತು ಎಂಹ ಮಚಾಡೋ ಮಾತು ನೆಟ್ಟಿಗರಿಗೆ ನಗು ತರಿಸಿದೆ. ಹಲವರು ಈ ಬಗ್ಗೆ ಕೋಪ ವ್ಯಕ್ತಪಡಿಸಿದ್ದಾರೆ.