ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 2023-2024ರ ಹಣಕಾಸು ವರ್ಷದಲ್ಲಿ 40,000 ಉದ್ಯೋಗವಕಾಶಗಳನ್ನು ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಮುಖ್ಯವಾಗಿ ಫ್ರೆಶರ್ ಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ.
ಟೆಕ್ ದೈತ್ಯ ಟಿಸಿಎಸ್ 44,000ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ಮತ್ತು ಅತ್ಯಧಿಕ ಸಂಖ್ಯೆಯ ಅನುಭವಿ ವೃತ್ತಿಪರರನ್ನು ಉದ್ಯೋಗಕ್ಕೆ ನಿಯೋಜಿಸಲು ಯೋಜಿಸುತ್ತಿದೆ. ಟೆಕ್ ನೇಮಕಾತಿ ನಿಧಾನವಾಗುತ್ತಿದೆ ಎಂಬ ಟೀಕೆಗಳ ನಡುವೆ ಉದ್ಯೋಗಾಕಾಂಕ್ಷಿಗಳಿಗೆ ಕ್ಷೇತ್ರದೊಳಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಲು ಟಿಸಿಎಸ್ ಮುಂದಾಗುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ.
ಟೆಕ್ ಉದ್ಯಮದಲ್ಲಿ ಕೆಲವು ಹಿನ್ನಡೆಗಳಾಗಿದ್ದರೂ ಅದರ ಹೊರತಾಗಿ, ಉತ್ತಮ ಪ್ರತಿಭೆಗಳು ಮತ್ತು ಮಹಿಳೆಯರ ಏಕೈಕ-ದೊಡ್ಡ ಉದ್ಯೋಗದಾತ ಎಂದೇ ಖ್ಯಾತಿ ಪಡೆದಿದೆ. ಈ ಮಧ್ಯೆ, ದೇಶದ ಅತಿದೊಡ್ಡ ಖಾಸಗಿ ವಲಯದಲ್ಲಿ 22,600 ಉದ್ಯೋಗಿಗಳ ನಿವ್ವಳವನ್ನು ಸೇರಿಸಿದೆ. ಮಹಿಳಾ ಉದ್ಯೋಗಿಗಳು ಭಾರತದ ಸಾಂಕ್ರಾಮಿಕ ನಂತರದ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೇ ಹೇಳಲಾಗಿದೆ. ಐಟಿ ಉದ್ಯಮದಲ್ಲಿ 35.7 ಪ್ರತಿಶತದಷ್ಟು ಮಹಿಳಾ ಉದ್ಯೋಗಿಗಳೇ ಸೇರಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.