ಆಲೂಗಡ್ಡೆ ಪ್ರಪಂಚದಾದ್ಯಂತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಮನೆಯ ತರಕಾರಿಯಾಗಿದೆ. ದೇಶಾದ್ಯಂತ ಪ್ರತಿಯೊಂದು ಭಕ್ಷ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ.
ಆಲೂಗಡ್ಡೆಯನ್ನು ವ್ಯಾಪಕವಾಗಿ ಬಳಸಲು ಕಾರಣವೆಂದರೆ ಅದರ ಅಗ್ಗದ ದರ. ಆದರೆ ತರಕಾರಿಗಳ ರಾಜನ ಬಗ್ಗೆ ಈ ಸಾಮಾನ್ಯ ಕಲ್ಪನೆಯನ್ನು ಮುರಿಯುವ ಒಂದು ವಿಧದ ಆಲೂಗಡ್ಡೆ ಜಗತ್ತಿನಲ್ಲಿದೆ.
ನಂಬಲಾಗದಷ್ಟು ಅಪರೂಪದ ಬೆಲೆ ಆ ಆಲೂಗಡ್ಡೆಗಿದೆ. ಅದರ ಹೆಸರೇ ಲಾ ಬೊನೊಟ್. ಇದು ಪ್ರತಿ ಕೆಜಿಗೆ 40,000-50,000 ರೂಪಾಯಿಗೆ ಮಾರಾಟವಾಗುತ್ತದೆ. ಮತ್ತು ವರ್ಷಕ್ಕೆ 10 ದಿನಗಳವರೆಗೆ ಮಾತ್ರ ಈ ವಿಶೇಷ ಆಲೂಗಡ್ಡೆ ಕಂಡುಬರುತ್ತದೆ.
ಆಲೂಗೆಡ್ಡೆಯ ಈ ರೂಪಾಂತರವನ್ನು ಫ್ರಾನ್ಸ್ ನ ಐಲ್ ಡಿ ನೊಯಿರ್ಮೌಟಿಯರ್ ಎಂಬ ದ್ವೀಪದಲ್ಲಿ ಬೆಳೆಯಲಾಗುತ್ತದೆ. ಈ ಆಲೂಗೆಡ್ಡೆ ತುಂಬಾ ಅಪರೂಪವಾಗಿದ್ದು ಇದನ್ನು 50 ಚದರ ಮೀಟರ್ ಭೂಮಿಯಲ್ಲಿ ಮಾತ್ರ ಬೆಳೆಸಲಾಗುತ್ತದೆ.
ಈ ಆಲೂಗಡ್ಡೆಯನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳನ್ನು ಮರಳು ಭೂಮಿಯಲ್ಲಿ ಮಾತ್ರ ಬೆಳೆಸಲಾಗುತ್ತದೆ. ಕಡಲಕಳೆ ಮತ್ತು ಪಾಚಿಯನ್ನು ಗೊಬ್ಬರವನ್ನಾಗಿ ಆಲೂಗಡ್ಡೆ ಬೆಳೆಗೆ ಹಾಕಲಾಗುತ್ತದೆ.
ಈ ಕಾರಣದಿಂದ ಇವುಗಳನ್ನು ವಿಶ್ವದ ಅತ್ಯಂತ ದುಬಾರಿ ಆಲೂಗಡ್ಡೆಯೆನ್ನಲಾಗುತ್ತದೆ. ವಿಶೇಷವಾಗಿ Le Bonnotte ಆಲೂಗಡ್ಡೆಯ ರುಚಿ ಇತರವುಗಳಿಗಿಂತ ಭಿನ್ನವಾಗಿದೆ. ಇದು ಸ್ವಲ್ಪ ಹುಳಿ, ಸ್ವಲ್ಪ ಉಪ್ಪು ರುಚಿಯನ್ನು ಹೊಂದಿರುತ್ತದೆ.
ಆಲೂಗಡ್ಡೆಯನ್ನು ದುರ್ಬಲ ಮತ್ತು ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ ಮತ್ತು ವರ್ಷಕ್ಕೆ ಕೇವಲ ಒಂದು ವಾರದವರೆಗೆ ಪ್ರತ್ಯೇಕವಾಗಿ ಕೈಯಿಂದ ಒಂದೊಂದಾಗಿ ಕೀಳಲಾಗುತ್ತದೆ. ಈ ಆಲೂಗಡ್ಡೆಗಳ ಸಿಪ್ಪೆ ತೆಗೆಯದಂತೆ ಸಲಹೆ ನೀಡಲಾಗುತ್ತದೆ.
ಏಕೆಂದರೆ ಈ ಆಲೂಗಡ್ಡೆಯು ಮಣ್ಣಿನ ಎಲ್ಲಾ ಪರಿಮಳ ಮತ್ತು ಸುವಾಸನೆ ಹಾಗು ಹತ್ತಿರದ ಸಮುದ್ರದ ನೀರನ್ನು ಹೀರಿಕೊಂಡಿರುತ್ತದೆ.
ಈ ವಿಶೇಷ ಆಲೂಗಡ್ಡೆಗಳನ್ನು ಸಲಾಡ್ ಪ್ಯೂರಿ, ಸೂಪ್ ಮತ್ತು ಕ್ರೀಮ್ ತಯಾರಿಸಲು ಬಳಸಲಾಗುತ್ತದೆ. ವೈದ್ಯರ ಪ್ರಕಾರ ಬೊನೊಟ್ ಗಳನ್ನು ತೀವ್ರವಾದ ಕಾಯಿಲೆಗಳಿಂದ ರಕ್ಷಿಸಲು ಬಳಸಲಾಗುತ್ತದೆ. ಅಲ್ಲದೆ ಅವು ಸೂಪರ್‌ಮಾರ್ಕೆಟ್‌ಗಳಲ್ಲಿ ಲಭ್ಯವಾಗುವುದಿಲ್ಲ. ಜನ ಅವುಗಳನ್ನು ಖರೀದಿಸಲು ಇ-ಕಾಮರ್ಸ್ ಸೈಟ್‌ಗಳನ್ನು ಸಂಪರ್ಕಿಸಬೇಕಾಗುತ್ತದೆ.