ಕಳೆದ ವಾರ ಅಮೆರಿಕದಲ್ಲಿ ನೀರು ಪೂರೈಕೆ ಮಾಡುವ ಮುಖ್ಯ ನೀರಿನ ಮಾರ್ಗದಲ್ಲಿ 30-ಇಂಚು ಒಡೆದು ಕೆಲವು ಪ್ರದೇಶಗಳಲ್ಲಿ ದೊಡ್ಡ ಪ್ರವಾಹ ಉಂಟಾಯಿತು. ಅದರಲ್ಲಿಯೂ ನ್ಯೂ ಓರ್ಲಿಯನ್ಸ್ನ ಆಡುಬನ್ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಯಿತು.
ಪೈಪ್ನ ಸೋರಿಕೆಯು ಪ್ರದೇಶದಲ್ಲಿನ ನೀರಿನ ಸರಬರಾಜಿನ ಮೇಲೆ ಪರಿಣಾಮ ಬೀರಿತು. ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್ ಒಟ್ಟಿಗೇ ಸೇರಿದ್ದರಿಂದ ಜನರು ನೀರನ್ನು ಕುದಿಸಿ ಕುಡಿಯುವಂತೆ ಸಲಹೆ ನೀಡಲಾಯಿತು. ಭಯಾನಕ ಕಲುಷಿತ ನೀರು ಮಿಕ್ಸ್ ಆಗಿರುವ ಸಾಧ್ಯತೆ ಇರುವ ಕಾರಣ, ಹಾಗೆಯೇ ನೀರನ್ನು ಕುಡಿದರೆ ಅನಾರೋಗ್ಯ ಉಂಟಾಗಬಹುದು ಎಂದು ಎಚ್ಚರಿಕೆ ನೀಡಲಾಯಿತು.
ಇದರ ನಡುವೆಯೇ ಬಾಲಕಿಯೊಬ್ಬಳು ಈಜುಡುಗೆ ಧರಿಸಿ ಪ್ರವಾಹದ ನೀರಿನಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ. WWL-TV ಚಾನೆಲ್ 4 ನ ವರದಿಗಾರ್ತಿ ಲಿಲಿ ಕಮ್ಮಿಂಗ್ಸ್ ಇದರ ವಿಡಿಯೋ ಸೆರೆ ಹಿಡಿದಿದ್ದಾರೆ. ಗ್ಯಾಬಿ ಹೆಬರ್ಟ್ ಎಂಬಾಕೆ ಪ್ರವಾಹದ ನೀರಿನಲ್ಲಿ ಧುಮುಕುತ್ತಿರುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದು, ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ ಎಂದಿದ್ದಾರೆ.
ಪ್ರವಾಹದ ನೀರಿನಲ್ಲಿ ಈಜುವುದು ಅಪಾಯಕಾರಿ ಮತ್ತು ಬಾಲಕಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅನೇಕ ಕಮೆಂಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದು ಮೋಜಿನ ಸಂಗತಿಯಲ್ಲ. ಇಂಥ ಹುಚ್ಚು ಧೈರ್ಯ ಮಾಡಿದರೆ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ ಎಂದು ಹಲವರು ಹೇಳಿದ್ದಾರೆ.
https://twitter.com/lilyrcummings/status/1645458943085248513?ref_src=twsrc%5Etfw%7Ctwcamp%5Etweetembed%7Ctwterm%5E1645458943085248513%7Ctwgr%5Ea258f7db56419f021a1d701ed94f1ce509e93db3%7Ctwcon%5Es1_&ref_url=https%3A%2F%2Fwww.wwltv.com%2Farticle%2Fnews%2Fhealth%2Ftulane-swimmer-dives-flooded-new-orleans-street%2F289-cb7c8f1e-48ad-4bbf-a3f4-9a8074558cf9