HomeAutoಕೆ300 ಆರ್‌ - ಕೆ300 ಎನ್‌ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ....!

ಕೆ300 ಆರ್‌ – ಕೆ300 ಎನ್‌ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ….!

ಕೀವೇ ತನ್ನ ಕೆ300 ಎನ್‌ ಹಾಗೂ ಕೆ300 ಆರ್‌ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ.

ಈ ಹಿಂದೆ 2.65-2.85 ಲಕ್ಷ ರೂ.ವರೆಗೆ ಇದ್ದ ಕೆ300 ಇದೀಗ 2.55 ಲಕ್ಷ ರೂ.ಗಳಿಗೆ ಸಿಗಲಿದೆ. ಇದೇ ವೇಳೆ, ಕೆ300 ಆರ್‌‌ನ ಬೆಲೆಯು 2.99-3.19 ಲಕ್ಷ ರೂಗಳಿಂದ 2.65 ಲಕ್ಷ ರೂ.ಗಳಿಗೆ ಇಳಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬೆಲೆ ಪರಿಷ್ಕರಣೆ ಮೂಲಕ ಟಿವಿಎಸ್‌ನ ಅಪಾಚೆ ಆರ್‌ಆರ್‌ 310 ಹಾಗೂ ಬಿಎಂಡಬ್ಲ್ಯೂ ಜಿ 310 ಆರ್‌ಆರ್‌ಗಳೊಂದಿಗೆ ಬೆಲೆ ಸಮರಕ್ಕಿಳಿದಿದೆ ಕೀವೇ.

ಬಿಎಂಡಬ್ಲ್ಯೂ ಜಿ 310 ಆರ್‌ಆರ್‌ಗಿಂತಲೂ ಕೆ300 ಎನ್‌ 15,000 ರೂ.ನಷ್ಟು ಅಗ್ಗವಾಗಿದ್ದು, ಕೆಟಿಎಂ 250 ಡ್ಯೂಕ್‌ಗಿಂತ 18,000 ರೂ. ಅಗ್ಗವಾಗಿದೆ.

ಕೆ300 ಅವಳಿಗಳು ಒಂದೇ ಪ್ಲಾಟ್‌ಫಾರಂ ಮೇಲೆ ಅಭಿವೃದ್ಧಿಯಾಗಿದ್ದು, ಬಿಡಿ ಭಾಗಗಳೆಲ್ಲಾ ಬಹುತೇಕ ಒಂದೇ ರೀತಿಯದ್ದಾಗಿವೆ. ಕೆ300 ಆರ್‌ನಲ್ಲಿ ಫುಲ್ ಪೇರಿಂಗ್ ಮತ್ತು ಕ್ಲಿಪ್‌-ಆನ್‌ ಹ್ಲಾಂಡ್ಲ್‌ಬಾರ್‌ಗಳಿದ್ದರೆ, ಕೆ300 ಎನ್‌ನ್ಲಿ ನೇಕೆಡ್‌ ಸ್ಟ್ರೀಟ್‌ಫೈಟರ್‌ ವಿನ್ಯಾಸವಿದೆ.

For Latest News Updates, Join Our Whatsapp Community🚩
RELATED ARTICLES

Most Popular