alex Certify ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಜೆಲ್ಲಿಫಿಶ್‌ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಜೆಲ್ಲಿಫಿಶ್‌ಗಳು

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಗೆ ಅಪರೂಪದ ಅತಿಥಿಗಳು ಭೇಟಿ ಕೊಟ್ಟಿದ್ದು, ಸ್ಥಳೀಯರ ಗಮನ ಸೆಳೆಯುತ್ತಿವೆ.

’ವೆಲೆಲ್ಲಾ ವೆಲೆಲ್ಲಾ’ ಎಂದು ಗುರುತಿಸಲಾದ ಈ ನೀಲಿ ಬಣ್ಣದ ಜೆಲ್ಲಿ ಫಿಶ್‌ಗಳನ್ನು ದೂರದಲ್ಲೇ ನಿಂತು ನೋಡಲು ಸಾರ್ವಜನಿಕರಿಗೆ ಜಲ ಜೀವಶಾಸ್ತ್ರಜ್ಞರು ಮನವಿ ಮಾಡಿಕೊಂಡಿದ್ದಾರೆ.

“ವೆಲೆಲ್ಲಾ ವೆಲೆಲ್ಲಾಗಳು ಮುಕ್ತ ಸಾಗರದಲ್ಲಿ ವಾಸಿಸುವ ಚಪ್ಪಟೆ, ಮೊಟ್ಟೆಯಾಕೃತಿಯಲ್ಲಿರುವ ಹೈಡ್ರಾಯ್ಡ್ ಪಾಲಿಪ್‌ಗಳು (ಜೆಲ್ಲಿಫಿಶ್‌ನ ಸಹೋದರರು). ಕೆಲವೊಮ್ಮೆ ಈ ಜೀವಿಗಳು ಬಲವಾದ ಮಾರುತಗಳ ಕಾರಣದಿಂದ ಕಡಲ ತೀರಕ್ಕೆ ತಳ್ಳಲ್ಪಡುವ ಕಾರಣ ವಸಂತ ಹಾಗೂ ಬೇಸಿಗೆಯ ಆರಂಭದಲ್ಲಿ ಪಾಯಿಂಟ್ ರೆಯೆಸ್ ರಾಷ್ಟ್ರೀಯ ಕಡಲತೀರದಲ್ಲಿ ಕಾಣಸಿಗುತ್ತವೆ,” ಎಂದು ಅಧಿಕಾರಿಗಳು ಫೇಸ್ಬುಕ್‌ನಲ್ಲಿ ಬರೆದಿದ್ದಾರೆ.

’ಗಾಳಿಯಂತೆ ತೂರಿ ಬರುವ ನಾವಿಕರು’ ಎಂದು ಈ ಜೀವಿಗಳನ್ನು ಕರೆಯಲಾಗುತ್ತದೆ. ಜ಼ೂಪ್ಲಾಂಕ್ಟಾನ್‌ಗಳು ಹಾಗೂ ಮೀನಿನ ಮೊಟ್ಟೆಗಳನ್ನು ತಮ್ಮ ನೀಲಿ ಬಣ್ಣದ ಗ್ರಹಣಾಂಗಗಳ ಮೂಲಕ ತಿನ್ನುತ್ತವೆ ಈ ಜೆಲ್ಲಿಫಿಶ್‌ಗಳು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...