ಭಾರತದ ಗಡಿ ಕುರಿತು ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ಹೇಳಿಕೆಯನ್ನು ಆಧರಿಸಿದ ಸುದ್ದಿ ಲೇಖನದ ಮುಖ್ಯಾಂಶವನ್ನು ಉಲ್ಲೇಖಿಸಿ “ಇಂದಿನ ದಿ ಹಿಂದೂ ಮುಖ್ಯಾಂಶಗಳು ಅಮಿತ್ ಶಾ “ಭಾರತದ ಗಡಿಗಳು ಸುರಕ್ಷಿತವಾಗಿದೆ; ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಹಸಿ ಸುಳ್ಳು ಅಥವಾ ಅವರ ಅಜ್ಞಾನ. ಅವರು ಗೃಹ ಸಚಿವರಾಗಲು ಅರ್ಹರಲ್ಲ, ಅಥವಾ ಬಾಂಬಿನೋದ ಅಕ್ರಮ ದ್ವಿಪೌರತ್ವದ ಬಗ್ಗೆ ಕೆಲಸ ಮಾಡುವುದು ಉತ್ತಮ.” ಎಂದು ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಭಾರತದ ಭೂಪ್ರದೇಶಕ್ಕೆ ಯಾರೂ ಕೂಡ ಅತಿಕ್ರಮಣ ಮಾಡಲು ಆಗಲ್ಲ. ಆ ಸಮಯ ಮುಗಿದಿದೆ. ಈಗ ಯಾರೂ ನಮ್ಮ ಗಡಿಯನ್ನು ನೋಡುವ ಧೈರ್ಯ ಮಾಡುತ್ತಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದರು.
ಭಾರತದ ಪೂರ್ವದ ಸ್ಥಳವಾದ ಅರುಣಾಚಲ ಪ್ರದೇಶದ ಗಡಿ ಗ್ರಾಮವಾದ ಕಿಬಿಥೂದಲ್ಲಿ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅಮಿತ್ ಶಾ ಮಾತನಾಡಿದ್ದರು.