HomeKarnatakaBIG NEWS: ಎರಡು ಜೋಳಿಗೆ ಹಾಕಿಕೊಂಡೇ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕ; ಕಾರಣ ಹೇಳಿದ ಸೊಗಡು...

BIG NEWS: ಎರಡು ಜೋಳಿಗೆ ಹಾಕಿಕೊಂಡೇ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕ; ಕಾರಣ ಹೇಳಿದ ಸೊಗಡು ಶಿವಣ್ಣ

ತುಮಕೂರು: ನೂರಕ್ಕೆ ನೂರರಷ್ಟು ನನಗೆ ಟಿಕೆಟ್ ಫೈನಲ್ ಆಗಿದೆ. ದೆಹಲಿಯಲ್ಲಿ ಎಲ್ಲರಿಗೂ ಮನವಿ ಮಾಡಲಾಗಿದೆ. ಟಿಕೆಟ್ ಸಿಗುವುದು ಖಚಿತವಾಗಿದೆ ಎಂದು ಬಿಜೆಪಿ ನಾಯಕ ಸೊಗಡು ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ಜೋಳಿಗೆ ಹಾಕಿಕೊಂಡೇ ಸುದ್ದಿಗೋಷ್ಠಿ ನಡೆಸಿದ ಸೊಗಡು ಶಿವಣ್ಣ, ನಾಮಿನೇಷನ್ ಫೈಲ್ ಮಾಡಲು ಸಿದ್ಧತೆ ನಡೆಸಿದ್ದೇನೆ. ಒಂದು ವೋಟು, ಇನ್ನೊಂದು ನೋಟಿಗೆ ಜೋಳಿಗೆ ಹಾಕಿಕೊಂಡಿದ್ದೇನೆ. ಪ್ರಜಾಪ್ರಭುತ್ವ ಉಳಿಸಲು ನನ್ನ ಜೊತೆ ಬಂದು ಪ್ರಚಾರ ಮಾಡಲಿ ಎಂದು ಹೇಳಿದ್ದಾರೆ.

ನನ್ನ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ನನಗೆ ಟಿಕೆಟ್ ಸಿಗುವುದು ಖಚಿತ. ಅವರ ಕಿವಿಗೆ ಕೇಳಲಿ ಎಂದು ತಮಟೆ ವಾದ್ಯವನ್ನು ಕೊಟ್ಟಿದ್ದೆವೆ. ಎಲ್ಲಾ ಬಂಧುಗಳು ಬಾಯಿಬಿಟ್ಟು ಹೇಳುತ್ತಿದ್ದಾರೆ. ನೀವು ಸ್ಪರ್ಧೆ ಮಾಡಿ ಅಂತಾ. ಕಣ್ಣ ಮುಂದೆ ಪ್ರಜಾಪ್ರಭುತ್ವ ನಾಶವಾಗುವುದು ಕಾಣುತ್ತಿದೆ. ಪ್ರಜಾಪ್ರಭುತ್ವ ಉಳಿಸಲು ನನ್ನ ಜೊತೆ ಬಂದು ಪ್ರಚಾರ ಮಾಡಿ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular