
ಮಾರೇನಹಳ್ಳಿ ಚಕ್ ಪೋಸ್ಟ್ ಬಳಿ ಏಪ್ರಿಲ್ 6ರಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಕಾರು ಸೀಜ್ ಮಾಡಲಾಗಿತ್ತು. ಈ ವೇಳೆ 2 ಲಕ್ಷ ಮೌಲ್ಯದ ಸೀರೆ, ಮೊಬೈಲ್ ಸೇರಿ ಹಲವು ವಸ್ತುಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಕಾರು ಚಾಲಕ ರಾಮಚಂದ್ರಪ್ಪನನ್ನು ವಶಕ್ಕೆ ಪಡೆದಿದ್ದರು.
ಕಾರಿನಲ್ಲಿ ಪತ್ತೆಯಾದ ವಸ್ತುಗಳ ಬಗ್ಗೆ ಸೂಕ್ತ ದಾಖಲೆ ನೀಡದ ಕಾರಣಕ್ಕೆ ಕಾರುಚಾಲಕ ರಾಮಚಂದ್ರಪ್ಪ ವಿರುದ್ಧ ತಿಲಕ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

