HomeKarnatakaಮದುವೆಗೂ ಮುನ್ನ HDK ಮುಂದೆ ಈ ಷರತ್ತು ಇಟ್ಟಿದ್ದರಂತೆ ಅನಿತಾ....!

ಮದುವೆಗೂ ಮುನ್ನ HDK ಮುಂದೆ ಈ ಷರತ್ತು ಇಟ್ಟಿದ್ದರಂತೆ ಅನಿತಾ….!

ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಇತರೆ ಪಕ್ಷಗಳಿಗಿಂತ ಮೊದಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಜೆಡಿಎಸ್, ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಇದರ ಮಧ್ಯೆ ಸ್ವಾರಸ್ಯಕರ ಸಂಗತಿ ಒಂದನ್ನು ಹೆಚ್.ಡಿ. ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.

ಭಾನುವಾರದಂದು ಮಧುಗಿರಿ ತಾಲೂಕಿನ ಡಿ ಕೈಮರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ರಾಜಕೀಯಕ್ಕೆ ಬರುವುದು ಅನಿತಾ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ರಾಜಕೀಯಕ್ಕೆ ಹೋಗುವುದಿಲ್ಲವೆಂದರೆ ಮಾತ್ರ ಮದುವೆ ಆಗುತ್ತೇನೆಂದು ಅನಿತಾ ಷರತ್ತು ಹಾಕಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ 2008ರ ವಿಧಾನಸಭಾ ಚುನಾವಣೆಯಲ್ಲಿ ಅನಿತಾ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡಿಸಲು ಮುಂದಾದಾಗ ಮಗ ನಿಖಿಲ್, ಅಪ್ಪ, ಪ್ರತಿಷ್ಠೆಗಾಗಿ ನಿಮ್ಮನ್ನು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ನೀವು ಸ್ಪರ್ಧಿಸಬೇಡಿ ಎಂದಿದ್ದ ಎಂದು ಕುಮಾರಸ್ವಾಮಿ ಇತಿಹಾಸ ಸ್ಮರಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular