HomeKarnatakaBIG NEWS: ಪ್ರಧಾನಿ ಸಫಾರಿ ವೇಳೆ ಕಾಣದ ಹುಲಿರಾಯ: ಹಿಡಿದು ಮಾರಿಬಿಡುವ ಭಯಕ್ಕೆ ಯಾವ ಗುಹೆಯೊಳಗೆ...

BIG NEWS: ಪ್ರಧಾನಿ ಸಫಾರಿ ವೇಳೆ ಕಾಣದ ಹುಲಿರಾಯ: ಹಿಡಿದು ಮಾರಿಬಿಡುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕುಳಿತಿದೆಯೋ ಅಯ್ಯೋ ಪಾಪ…… ಎಂದ ಸಿದ್ದರಾಮಯ್ಯ

ಬೆಂಗಳೂರು: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ ಮಾಡಿದ್ದು, ಸಫಾರಿ ವೇಳೆ ಎಲ್ಲಿಯೂ ಹುಲಿ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿಯವರು ಬಂಡಿಪುರ ಉದ್ಯಾನದಲ್ಲಿ ಸುಮಾರು 22 ಕಿ.ಮೀ ಸಫಾರಿ ನಡೆಸಿದರೂ ಹುಲಿರಾಯ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಟೀಕಿಸಿರುವ ಸಿದ್ದರಾಮಯ್ಯ, ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ.. ಅಯ್ಯೋ ಪಾಪ….!! ಎಂದಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ #SaveBandipur ( ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ.. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಪ್ರಧಾನಿ ನರೇಂದ್ರ ಮೋದಿ ಜೀ.. ಎಂದು ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular