ಬೆಂಗಳೂರು: ಆರ್ ಬಿ ಐ ನಿಯಮ ಉಲ್ಲಂಘನೆ ಮಾಡಿ ಹೆಚ್ಚುವರಿಯಾಗಿ ಹಣ ಸಾಗಿಸುತ್ತಿದ್ದ ಆರೋಪದಲ್ಲಿ ಬರೋಬ್ಬರಿ 4.75 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ.
ನೀತಿ ಸಂಹಿತೆ ಹಾಗೂ ಆರ್ ಬಿ ಐ ನಿಯಮ ಉಲ್ಲಂಘಿಸಿ ಎಟಿಎಂ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ 4 ಕೋಟಿ 75 ಲಕ್ಷ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ರೈಟರ್ಸ್ ಕಂಪನಿಗೆ ಸೇರಿದ್ದ 3 ಎಟಿಎಂ ವಾಹನಗಳಲ್ಲಿ ಈ ಪ್ರಮಾಣದ ಹಣವನ್ನು ಸಾಗಿಸಲಾಗುತ್ತಿತ್ತು. ಆನೇಕಲ್ ಬಳಿ ವಾಹನವನ್ನು ತಪಾಸಣೆ ನಡೆಸಿದಾಗ 4.75 ಕೋಟಿ ಹಣವಿರುವುದು ಪತ್ತೆಯಾಗಿದೆ.
ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.