ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಬಿಸಿಲಿನಿಂದ ಜನ ತತ್ತರಿಸಿದ್ದಾರೆ. ಈ ಬಾರಿ ದೇಶದಲ್ಲಿ ಉಷ್ಣಾಂಶ ಪ್ರಮಾಣವು ಏಪ್ರಿಲ್ – ಜೂನ್ ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಪಂಜಾಬ್ ಸರ್ಕಾರ ಬೇಸಿಗೆಯಲ್ಲಿ ವಿದ್ಯುತ್ ಉಳಿಸಲು ಹಾಗೂ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದೆ.
ಸರ್ಕಾರಿ ಕಚೇರಿಗಳು ಮೇ 2 ರಿಂದ ಜೂನ್ 15 ರವರೆಗೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಇದರಿಂದಾಗಿ ಬೇಸಿಗೆಯಲ್ಲಿ 300 ರಿಂದ 350 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗುವುದರ ಜೊತೆಗೆ ನೌಕರರು ತಮ್ಮ ಕುಟುಂಬ ವರ್ಗದ ಜೊತೆ ಇರಲು ಹೆಚ್ಚಿನ ಸಮಯಾವಕಾಶ ಸಿಗಲಿದೆ ಹಾಗೂ ಸಾರ್ವಜನಿಕರಿಗೂ ಸಹ ಸಕಾಲಕ್ಕೆ ಸರ್ಕಾರಿ ಸೇವೆ ಒದಗಿಸಲು ಅನುಕೂಲವಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.