ಅಮ್ಮನಿಗೆ ‌ʼಪದ್ಮಭೂಷಣʼ ಸಿಕ್ಕ ಖುಷಿಯಲ್ಲಿ ತಾವು ಯುಕೆ ಪ್ರಥಮ ಮಹಿಳೆ ಎಂಬುದನ್ನೇ ಮರೆತಿದ್ದರು ಅಕ್ಷತಾ ಮೂರ್ತಿ….!

ಇನ್ಫೋಸಿಸ್ ಸಂಸ್ಥೆ ಅಧ್ಯಕ್ಷೆ ಹಾಗೂ ಸಹ ಸಂಸ್ಥಾಪಕಿಯಾಗಿರುವ ಸುಧಾಮೂರ್ತಿ ಇವರು ದಾನ, ಸಮಾಜಮುಖಿ ಕಾರ್ಯಗಳಿಂದಲೇ ಜನ-ಮನ ಗೆದ್ದವರು. ಇವರ ಈ ಸಮಾಜಸೇವೆಯನ್ನ ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಸುಧಾಮೂರ್ತಿಯವರಿಗೆ ಪ್ರಶಸ್ತಿಯನ್ನ ಪ್ರದಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸುಧಾಮೂರ್ತಿಯವರ ಪತಿ ಎನ್.ಆರ್. ನಾರಾಯಣ್‌ ಮೂರ್ತಿ, ಪುತ್ರ ರೋಹನ್ ಮೂರ್ತಿ, ಮಗಳು ಅಕ್ಷತಾ ಮೂರ್ತಿ ಹಾಗೂ ಸುಧಾಮೂರ್ತಿಯವರ ಸಹೋದರಿ ಡಾ. ಸುನಂದಾ ಕುಲಕರ್ಣಿಯವರು ಕೂಡಾ ಭಾಗವಹಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ತಮ್ಮ ಮಕ್ಕಳನ್ನ ಎಷ್ಟು ಸರಳವಾಗಿ ಬೆಳೆಸಿದ್ದಾರೆ ಅನ್ನೊದಕ್ಕೆ ಸಾಕ್ಷಿಯಾಗಿ ಒಂದು ಘಟನೆ ನಡೆಯಿತು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದ ಯುಕೆ ಪಿಎಂ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ, ಕೆಲ ಕ್ಷಣದವರೆಗೆ ತಾವು ಯುಕೆ ಪ್ರಥಮ ಮಹಿಳೆ ಅಂತಾನೇ ಮರೆತಿದ್ದ ಹಾಗಿತ್ತು. ಅಕ್ಷತಾಮೂರ್ತಿ, ಅಮ್ಮನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವೀಕ್ಷಿಸಲೆಂದೇ ಬಂದಿದ್ದರು.

ಅವರು ಬಂದ ತಕ್ಷಣ ಕುಟುಂಬದವರು ಎಲ್ಲಿ ಆಸೀನರಾಗಿದ್ದರೋ ಅಲ್ಲೇ ಹೋಗಿ ಖುಷಿಯಿಂದ ಕುಳಿತಿದ್ದರು. ಆ ಸಮಯದಲ್ಲಿ ಅವರು ತಾವು ಯುಕೆ ಪ್ರಧಾನಿ ಪತ್ನಿ ಅನ್ನೊದನ್ನ ಮರೆತು, ಸುಧಾಮೂರ್ತಿ ಮಗಳಾಗಿ, ಕುಳಿತಿದ್ದರು.

ಆಗ ಅವರು ಭದ್ರತೆ ಬಗ್ಗೆಯೂ ಅವರು ಮರೆತಿದ್ದರು. ಕೊನೆಗೆ ಅಧಿಕಾರಿಗಳು ಅವರಿಗೆ ಪ್ರೋಟೋಕಾಲ್‌ ನೆನಪಿಸಿ ಗಣ್ಯರು ಕುಳಿತುಕೊಳ್ಳುವ ಮುಂದಿನ ಸಾಲಿನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್ ಅವರ ಪಕ್ಕದಲ್ಲಿ ಕೂರಿಸಿದರು.

ಸುಧಾಮೂರ್ತಿಯವರು ತಮ್ಮ ಮಕ್ಕಳಲ್ಲಿ ಸರಳತೆ, ಸೌಜನ್ಯತೆ ಹೇಗೆ ಮೈಗೂಡಿಸಿದ್ದಾರೆ ಅನ್ನೋದನ್ನು ಅಲ್ಲಿದ್ದವರೆಲ್ಲ ಕಣ್ಣಾರೆ ನೋಡಿದ್ದರು. ಪ್ರವಾಹ ಸಂತ್ರಸ್ತರಿಗೆ ,ಕೊರೋನಾ ಪೀಡಿತರಿಗೆ ತಮ್ಮ ಸಂಸ್ಥೆಯಿಂದ ಸೂರು ಕಲ್ಪಿಸಿ, ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ಸುಧಾ ಮೂರ್ತಿ ಸಮಾಜಕ್ಕೆ ಪರಿಚಯಿಸಿದ್ದಾರೆ. ಸಾವಿರಾರು ಕೋಟಿಯ ಒಡತಿಯಾಗಿದ್ದರೂ ತಮ್ಮ ಸರಳತೆ ,ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಆದರ್ಶ ವ್ಯಕ್ತಿಯಾಗಿದ್ದಾರೆ.

https://twitter.com/adarshahgd/status/1643620077030219777?ref_src=twsrc%5Etfw%7Ctwcamp%5Etweetembed%7Ctwterm%5E1643620077030219777%7Ctwgr%5E5b1d587469a847439e26eb9906d26deb2bfeaf91%7Ctwcon%5Es1_&ref_url=https%3A%2F%2Fwww.moneycontrol.com%2Fnews%2Ftrends%2Fuk-first-lady-akshata-murty-accompanies-sudha-murty-for-padma-awards-ceremony-10368841.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read