ಎಷ್ಟೋ ಮನೆಗಳಲ್ಲಿ ಶ್ವಾನಗಳನ್ನ ಸಾಕುವ ಪರಿ ನೋಡಿದ್ದಿರಾ ? ಮನೆಯ ಸದಸ್ಯರಿಗಿಂತ ಹೆಚ್ಚಾಗಿ ನೋಡ್ಕೊಳ್ತಿರ್ತಾರೆ. ಆದ್ರೆ ಇದೇ ನಾಯಿಗಳಿಂದಾಗಿ ಅನೇಕ ಬಾರಿ ಮುಜುಗರ ಪಡುವ ಸಂದರ್ಭಗಳು ಸಹ ಎದುರಾಗಿರುತ್ತೆ. ಇತ್ತೀಚೆಗೆ ಶ್ವಾನವೊಂದು ಚಿಪ್ಸ್ ತಿನ್ನುವ ಭರದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಬೆಲೆಯ ಚಿಪ್ಸ್ ತಿಂದು ತೇಗಿತ್ತು.
ಡರಾವ್ಲೋ (Dravalo) ಅನ್ನೊ ವ್ಯಕ್ತಿ, ಈ ಇಂಟ್ರಸ್ಟಿಂಗ್ ವಿಚಾರವನ್ನ ಶೇರ್ ಮಾಡಿಕೊಂಡಿದ್ದಾರೆ. 3 ವಾರಗಳ ಹಿಂದೆ ಕಪ್ಪು ಬಣ್ಣದ ಲ್ಯಾಬ್ರಡಾರ್ ಶ್ವಾನವೊಂದು ತನ್ನ ಮಾಲೀಕಳೊಂದಿಗೆ ಅಂಗಡಿಯೊಂದಕ್ಕೆ ಬಂದಿತ್ತು. ಆ ಶ್ವಾನ ಅಲ್ಲಿಯೇ ಇದ್ದ, ವಿಶೇಷ ಬಗೆಯ ಹೃದಯಾಕಾರದ ಚಿಪ್ಸ್ ಗಳನ್ನ ಗಬಗಬನೆ ತಿಂದು ತೇಗಿತ್ತು.
ಆ ಕ್ಷಣಕ್ಕೆ ಆ ನಾಯಿಯ ಜೊತೆ ಬಂದ ಮಹಿಳೆಗೂ ಅದರಲ್ಲಿ ಏನು ವಿಶೇಷ ಇರುವುದು ಗೊತ್ತಾಗಿರಲಿಲ್ಲ. ಆದರೆ ಯಾವಾಗ ಆ ಶ್ವಾನ 1 ಕೋಟಿ ರೂಪಾಯಿ ಬೆಲೆಯ ಚಿಪ್ಸ್ ತಿಂದಿದೆ ಅನ್ನೊದು ಗೊತ್ತಾಯ್ತೋ, ಆಕೆ ಹೌಹಾರಿ ಹೋಗಿದ್ದಳು.
ಅಸಲಿಗೆ ವಾಲ್ಕರ್ ಕ್ರಿಸ್ಪ ಹಾಗೂ ಹಾರ್ಟ್ ಶೇಪ್ ಕ್ರಿಸ್ಪ್ ಹಂಟಿಂಗ್ ನಡುವೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಲ್ಲಿ ಸ್ಪರ್ಧಿಗಳು ಪರ್ಫೆಕ್ಟ್ ಹೃದಯಾಕಾರದ ಚಿಪ್ಸ್ ನ್ನ ಹುಡುಕಿ ತೆಗೆಯಬೇಕಾಗಿತ್ತು. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಒಂದು ಲಕ್ಷ ಡಾಲರ್ ಬಹುಮಾನ ಘೋಷಿಸಲಾಗಿತ್ತು.
ಆದರೆ ಲ್ಯಾಬ್ರಡಾರ್ ಚಿಪ್ಸ್ ತಿನ್ನುವ ಭರದಲ್ಲಿ ಆ ಪರ್ಫೆಕ್ಟ್ ಹಾರ್ಟ್ ಶೇಪ್ ಚಿಪ್ಸನ್ನೂ ತಿಂದು ಮುಗಿಸಿತ್ತು. ಇದರಿಂದಾಗಿ ಆಕೆಯ ಕೈಗೆ ಸಿಗಬೇಕಾಗಿದ್ದ ಒಂದು ಕೋಟಿ ರೂಪಾಯಿಯ ಚಿಪ್ಸ್ ಶ್ವಾನದ ಹೊಟ್ಟೆ ಸೇರಿತ್ತು. ಇದರಿಂದಾಗಿ ಆಕೆಯ ಕೈಗೆ ಸೇರಬೇಕಾಗಿದ್ದ ಒಂದು ಕೋಟಿ ರೂಪಾಯಿ ಮಿಸ್ ಆಗಿತ್ತು. ಆಗ ಆಕೆ ಬೇರೆ ಮಾರ್ಗವಿಲ್ಲದೇ ಬರಿಗೈಯಿಂದಾನೇ ಮನೆಗೆ ಹಿಂದಿರುಗಿದ್ದಾಳೆ.