ಸುಲಭವಾಗಿ ತಯಾರಿಸಿ ಶುಚಿ – ರುಚಿಯಾದ ಖರ್ಜೂರ ಬಿಸ್ಕತ್

ಬೇಕಾಗುವ ಪದಾರ್ಥಗಳು : ಮೈದಾಹಿಟ್ಟು – 1 ಕಪ್, ಹಸಿ ಖರ್ಜೂರದ ತಿರುಳು – 1 ಕಪ್, ಹಾಲು – ಸ್ವಲ್ಪ, ಗೋಡಂಬಿ ತರಿ – 4 ಚಮಚ, ಸಕ್ಕರೆ ಪುಡಿ – 75ಗ್ರಾಂ, ಬೇಕಿಂಗ್ ಪೌಡರ್ – 1 ಚಮಚ.

ತಯಾರಿಸುವ ವಿಧಾನ : ಮೈದಾಹಿಟ್ಟು, ಬೇಕಿಂಗ್ ಪೌಡರ್ ಸೇರಿಸಿ ಜರಡಿ ಹಿಡಿದು ಸಕ್ಕರೆ ಪುಡಿ, ಹಾಲು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಅರ್ಧ ಗಂಟೆ ಫ್ರಿಜ್ ನಲ್ಲಿಡಿ. ನಂತರ ಹಿಟ್ಟನ್ನು ಹೊರ ತೆಗೆದು ಅರ್ಧ ಸೆಂ.ಮೀ. ದಪ್ಪ ಇರುವಂತೆ 2 ಚಪಾತಿ ಲಟ್ಟಿಸಿಕೊಳ್ಳಿ.

ಖರ್ಜೂರವನ್ನು ಸಣ್ಣ ಚೂರು ಮಾಡಿಕೊಂಡು ಗೋಡಂಬಿ ತರಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಒಂದು ಲಟ್ಟಿಸಿದ ಚಪಾತಿಯ ಮೇಲೆ ಖರ್ಜೂರ, ಗೋಡಂಬಿ ಮಿಶ್ರಣವನ್ನು ಹರಡಿ.

ಇನ್ನೊಂದು ಚಪಾತಿ ಮೇಲಿಟ್ಟು ಹಗುರವಾಗಿ ಲಟ್ಟಿಸಿ. 1 ಬಾಕ್ಸ್ ಮುಚ್ಚಳದಲ್ಲಿ ಒಂದೇ ಅಳತೆಯಲ್ಲಿ ಬಿಲ್ಲೆಗಳನ್ನು ಕೊರೆದು ಬೇಕಿಂಗ್ ತಟ್ಟೆಗೆ ತುಪ್ಪ ಸವರಿ ಬಿಲ್ಲೆಗಳನ್ನು ಜೋಡಿಸಿ. ಓವನ್ ನಲ್ಲಿ 15 ನಿಮಿಷ ಬೇಯಿಸಿ. ಈಗ ರುಚಿಕರ ಖರ್ಜೂರದ ಬಿಸ್ಕತ್ ಸವಿಯಲು ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read