HomeEntertainmentViral Video | ಪಂಚೆಯುಟ್ಟು ಕುಣಿದ ಸಲ್ಮಾನ್ ಖಾನ್; ಸಾಥ್‌ ಕೊಟ್ಟ ವೆಂಕಟೇಶ್‌ - ರಾಮ್‌...

Viral Video | ಪಂಚೆಯುಟ್ಟು ಕುಣಿದ ಸಲ್ಮಾನ್ ಖಾನ್; ಸಾಥ್‌ ಕೊಟ್ಟ ವೆಂಕಟೇಶ್‌ – ರಾಮ್‌ ಚರಣ್

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌’ ನ ಹೊಚ್ಚ ಹೊಸ ಹಾಡು ಯೆಂಟಮ್ಮಾ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಹಾಡಿನಲ್ಲಿ ಸಲ್ಮಾನ್ ಖಾನ್ , ವೆಂಕಟೇಶ್ ಮತ್ತು ರಾಮ್ ಚರಣ್ ಪಂಚೆ ತೊಟ್ಟು ನೃತ್ಯ ಮಾಡಿದ್ದಾರೆ. ಹಾಡು ಬಿಡುಗಡೆಯಾದ ಕೆಲ ಗಂಟೆಗಳಲ್ಲೇ ಲಕ್ಷಾಂತರ ವೀಕ್ಷಣೆ ಗಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೆಂಟಮ್ಮ ಹಾಡನ್ನು ವಿಶಾಲ್ ದಾದ್ಲಾನಿ ಮತ್ತು ಪಾಯಲ್ ದೇವ್ ಹಾಡಿದ್ದಾರೆ ಮತ್ತು ಇದನ್ನು ಪಾಯಲ್ ದೇವ್ ಸಂಯೋಜಿಸಿದ್ದಾರೆ. ಶಬ್ಬೀರ್ ಅಹಮದ್ ಅವರ ಸಾಹಿತ್ಯವಿದೆ.

ಹಾಡಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿರುವ ರಾಮ್ ಚರಣ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ . “ಪರದೆಯ ಮೇಲಿನ ನನ್ನ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಲವ್ ಯೂ ಭಾಯ್. ಈ ಸಂಪೂರ್ಣ ದಂತಕಥೆಗಳೊಂದಿಗೆ ನೃತ್ಯ……. ಯೆಂಟಮ್ಮಾ ಹಾಡು ಇದೀಗ ಹೊರಬಂದಿದೆ. ” ಎಂದು ಬರೆದುಕೊಂಡಿದ್ದಾರೆ.

ಫರ್ಹಾದ್ ಸಾಮ್ಜಿ ನಿರ್ದೇಶಿಸಿದ, ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ ಅನ್ನು ಈ ಹಿಂದೆ ಕಭಿ ಈದ್ ಕಭಿ ದೀಪಾವಳಿ ಎಂದು ಹೆಸರಿಸಲಾಗಿತ್ತು. ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸುತ್ತಿದ್ದಾರೆ. ಚಿತ್ರ ಇದೇ ತಿಂಗಳು ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular