alex Certify ದೇಶದಲ್ಲಿ 13 ಕೋಟಿ ಮೋದಿಯರಿದ್ದಾರೆ; ಜಾಮೀನು ಅರ್ಜಿಯಲ್ಲಿ ರಾಹುಲ್ ಗಾಂಧಿ ಸಮರ್ಥನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ 13 ಕೋಟಿ ಮೋದಿಯರಿದ್ದಾರೆ; ಜಾಮೀನು ಅರ್ಜಿಯಲ್ಲಿ ರಾಹುಲ್ ಗಾಂಧಿ ಸಮರ್ಥನೆ

2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ “ಮೋದಿ ಉಪನಾಮ” ಹೇಳಿಕೆಗೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ರಾಹುಲ್ ಗಾಂಧಿ ದೇಶದಲ್ಲಿ 13 ಸಾವಿರ ಮೋದಿಯರಿದ್ದಾರೆ. ಅವರೆಲ್ಲಾ ದೂರು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಸೂರತ್‌ನ ಸೆಷನ್ಸ್ ನ್ಯಾಯಾಲಯ ಸೋಮವಾರ ಜಾಮೀನು ನೀಡಿದ್ದು ಜಾಮೀನು ಅರ್ಜಿಯಲ್ಲಿ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮಾತ್ರ ತಮ್ಮ ವಿರುದ್ಧ ದೂರು ನೀಡಬಹುದು ಎಂದಿದ್ದಾರೆ.

ಮೋದಿ ಉಪನಾಮ ಪ್ರಕರಣದಲ್ಲಿ ಶಿಕ್ಷೆಯನ್ನು ಪ್ರಶ್ನಿಸಿ ಸೂರತ್ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ರಾಹುಲ್ ಗಾಂಧಿ, ದೇಶದಲ್ಲಿ 13 ಕೋಟಿ ಮೋದಿ ಹೆಸರಿನ ಜನರಿದ್ದಾರೆ. ಎಲ್ಲಾ 13 ಕೋಟಿ ಜನರಿಗೆ ದೂರು ಸಲ್ಲಿಸುವ ಹಕ್ಕಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿಯವರ ವಿರುದ್ಧದ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ದೂರು ಸಲ್ಲಿಸಬಹುದು. ಪೂರ್ಣೇಶ್ ಮೋದಿಗೆ ದೂರು ಸಲ್ಲಿಸಲು ಯಾವುದೇ ಹಕ್ಕಿಲ್ಲ ಎಂದಿದ್ದಾರೆ.

ಮೋದಿ ಎಂಬ ಹೆಸರಿನ ಯಾವುದೇ ಸಮಾಜ ಅಥವಾ ಸಮುದಾಯ ಇರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿ ಸಮುದಾಯದಲ್ಲೂ ಮೋದಿಗಳಿದ್ದಾರೆ. ಮೋದಿ ಎಂಬ ಉಪನಾಮ ಹೊಂದಿರುವ ವ್ಯಕ್ತಿಗಳ ಯಾವುದೇ ಸಂಘಟನೆಯಿಲ್ಲ. ಮಾನಹಾನಿಕರ ಹೇಳಿಕೆಯಲ್ಲಿ ಉಲ್ಲೇಖಿಸಲಾದ ಮೋದಿಗಳ ಯಾವುದೇ ನಿರ್ದಿಷ್ಟ ಗುಂಪು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಲೋಕಸಭೆಯಿಂದ ತನ್ನನ್ನು ಅನರ್ಹಗೊಳಿಸಲು ಕಾರಣವಾದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಪ್ರಕರಣದಲ್ಲಿ ತನ್ನ ದೋಷಾರೋಪಣೆಗೆ ತಡೆ ಕೋರಿ ಕಾಂಗ್ರೆಸ್ ನಾಯಕನ ಮನವಿಯನ್ನು ನ್ಯಾಯಾಲಯವು ಏಪ್ರಿಲ್ 13 ರಂದು ವಿಚಾರಣೆ ನಡೆಸಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...