ಆದಾಯ ತೆರಿಗೆ ಸಂಗ್ರದಲ್ಲಿ 20% ಏರಿಕೆ: ವಿತ್ತ ಸಚಿವಾಲಯದ ವರದಿ

ದೇಶದ ನೇರ ತೆರಿಗೆ ಸಂಗ್ರಹದಲ್ಲಿ 20% ಏರಿಕೆ ಕಂಡು ಬಂದಿದ್ದು, ಮಾರ್ಚ್ 31, 2023ಕ್ಕೆ ಅಂತ್ಯಗೊಂಡ ವಿತ್ತೀಯ ವರ್ಷದಲ್ಲಿ ₹19.68 ಲಕ್ಷ ಕೋಟಿ ರೂ.ಗಳ ನೇರ ತೆರಿಗೆ ಸಂಗ್ರಹಗೊಂಡಿದೆ ಎಂದು ವಿತ್ತ ಸಚಿವಾಲಯ ಸೋಮವಾರ ವರದಿಯಲ್ಲಿ ತಿಳಿಸಿದೆ. ಇದೇ ವೇಳೆ ಜಿಎಸ್‌ಟಿ ಸಂಗ್ರಹವು ₹18.1 ಲಕ್ಷ ಕೋಟಿಗೆ ಏರಿದ್ದು, 22%ನಷ್ಟು ಏರಿಕೆ ಕಂಡಿದೆ ಎಂದು ತಿಳಿದು ಬಂದಿದೆ.

ಆರ್ಥಿಕ ಚಟುವಟಿಕೆಗಳಲ್ಲಿ ಸುಸ್ಥಿರ ಪ್ರಗತಿ, ಸುಧಾರಿತ ತೆರಿಗೆ ಆಡಳಿತ ಹಾಗೂ ಸರಳೀಕೃತ ಅನುಸರಣೆಗಳ ಫಲಿತಾಂಶದಂತೆ ಕಾಣುವ ಈ ಅಂಕಿಅಂಶಗಳು, 2022-23ರ ವಿತ್ತೀಯ ವರ್ಷದಲ್ಲಿ, ರೀಫಂಡ್‌ಗಳನ್ನು ಹೊರತುಪಡಿಸಿದ ನಿವ್ವಳ ನೇರ ತೆರಿಗೆ ಸಂಗ್ರಹವು ₹16.61 ಲಕ್ಷ ಕೋಟಿ ರೂಗಳಷ್ಟಿದ್ದು, ಕಳೆದ ವಿತ್ತೀಯ ವರ್ಷದಲ್ಲಿ ಇದು ₹14.12 ಲಕ್ಷ ಕೋಟಿಯಷ್ಟಿತ್ತು ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿದು ಬಂದಿದೆ.

2022-23ರ ವಿತ್ತೀಯ ವರ್ಷದಲ್ಲಿ ರೀಫಂಡ್‌ ರೂಪದಲ್ಲಿ ₹3,07,352 ಕೋಟಿಗಳನ್ನು ವಿತರಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 37.42%ನಷ್ಟು ಏರಿಕೆ ಕಂಡಿದೆ ಎಂದು ಇದೇ ವರದಿಯಿಂದ ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read