‌ʼಪುಷ್ಪಾʼ ಹಾಡಿಗೆ ಮೈಕೈ ಕುಣಿಸಿದ ಸುನಿಲ್‌ ಗವಾಸ್ಕರ್; ವಿಡಿಯೋ ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಶುಕ್ರವಾರ ಅಹಮದಾಬಾದ್‌ನಲ್ಲಿ ಆರಂಭವಾಗಿದ್ದು, ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸುವ ಮೂಲಕ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಉತ್ತಮ ಆರಂಭವನ್ನು ಹೊಂದಿದೆ.

ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ನಟಿಯರಾದ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರು ಪ್ರದರ್ಶನ ನೀಡಿ ರೋಚಕ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

ಪ್ರೇಕ್ಷಕರು ಕಾರ್ಯಕ್ರಮವನ್ನು ಆನಂದಿಸುತ್ತಿದ್ದರೆ, ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ರಶ್ಮಿಕಾ ವೇದಿಕೆಯಲ್ಲಿ ‘ಪುಷ್ಪಾ’ ಚಿತ್ರದ ಹಿಟ್ ಸಾಂಗ್ ‘ಸಾಮಿ ಸಾಮಿ’ ಹಾಡಿಗೆ ಪ್ರದರ್ಶನ ನೀಡುತ್ತಿದ್ದಾಗ ಸುನಿಲ್ ಗವಾಸ್ಕರ್ ನೃತ್ಯ ಮಾಡಿದ್ದಾರೆ. ಕಾಮೆಂಟರಿ ಮಾಡಲು ಸ್ಟುಡಿಯೋದೊಳಗೆ ಕೂತಿದ್ದ ಸುನಿಲ್ ಗವಾಸ್ಕರ್ ಹಾಡು ಗುನುಗುತ್ತಾ ಹೆಜ್ಜೆ ಹಾಕಿದ್ದಾರೆ.

ಐಪಿಎಲ್ 2023 ರಲ್ಲಿ ಅಧಿಕೃತ ಪ್ರಸಾರಕರ ನಿರೂಪಕರಲ್ಲಿ ಒಬ್ಬರಾಗಿರುವ ನೆರೋಲಿ ಮೆಡೋಸ್, ಸುನಿಲ್ ಗವಾಸ್ಕರ್ ನೃತ್ಯದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

https://youtu.be/SVx2Iz0AHJ8

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read