HomeKarnatakaBIG NEWS: ಸ್ನೇಹಿತರೊಂದಿಗೆ ವೀಕೆಂಡ್ ಮೋಜು; ಈಜಲು ಹೋದ ಇಬ್ಬರು ಯುವತಿಯರು ಸೇರಿ ಮೂವರು ನೀರುಪಾಲು

BIG NEWS: ಸ್ನೇಹಿತರೊಂದಿಗೆ ವೀಕೆಂಡ್ ಮೋಜು; ಈಜಲು ಹೋದ ಇಬ್ಬರು ಯುವತಿಯರು ಸೇರಿ ಮೂವರು ನೀರುಪಾಲು

ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಮೂವರು ನೀರು ಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.

ಬೆಂಗಳೂರಿನ ಸಾರಾಯಿಪಾಳ್ಯದ ಪೂಜಾ, ರಾಧಿಕಾ ಹಾಗೂ ಇಮ್ರಾನ್ ಮೃತರು. 6 ಸ್ನೇಹಿತರು ಶ್ರೀನಿವಾಸ ಸಾಗರ ಜಲಾಶಯಕ್ಕೆ ತೆರಳಿದ್ದರು. ಈ ವೇಳೆ ಈಜಲೆಂದು ನೀರಿಗಿಳಿದಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ.

ಪೂಜಾ ಎಂಬ ಯುವತಿ ನೀರಿನಲ್ಲಿ ಮುಳುಗುತ್ತಿದ್ದಂತೆ ರಾಧಿಕಾ ಆಕೆಯ ರಕ್ಷಣೆಗೆ ಮುಂದಾಗಿದ್ದಾಳೆ. ಇಬ್ಬರು ಯುವತಿಯರನ್ನು ರಕ್ಷಿಸಲು ಹೋದ ಯುವಕ ಇಮ್ರಾನ್ ಕೂಡ ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular