ಆನ್‌ಲೈನ್ ಹ್ಯಾಕಿಂಗ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಡೆಯುತ್ತಲೇ ಇವೆ. ಹೆಚ್ಚಿನ ಸಂದರ್ಭಗಳಲ್ಲಿ ಕರೆ ಅಥವಾ ವೆಬ್‌ಸೈಟ್‌ಗೆ ಲಿಂಕ್ ಮೂಲಕ ಜನರನ್ನು ವಂಚಿಸಲಾಗುತ್ತದೆ. ಈಗ ಹ್ಯಾಕಿಂಗ್‌ಗಾಗಿ ಸಾಧನವೊಂದು ಮಾರುಕಟ್ಟೆಗೆ ಬಂದಿದ್ದು ಸಂಚಲನ ಸೃಷ್ಟಿಸಿದೆ. ಇದನ್ನು ಜನರು ಬಳಸುತ್ತಿದ್ದಾರೆ ಮತ್ತು ಸುಲಭವಾಗಿ ಖರೀದಿಸುತ್ತಿದ್ದಾರೆ. ಇದು ತಮಾಷೆಯ ಸಾಧನವಲ್ಲ, ತುಂಬಾ ಅಪಾಯಕಾರಿ.
ಈ ಸಾಧನದ ಸಹಾಯದಿಂದ ಸುಲಭವಾಗಿ ಸ್ಮಾರ್ಟ್ ಡಿವೈಸ್‌ಗಳನ್ನು ಹ್ಯಾಕ್ ಮಾಡುತ್ತಾರೆ. ಈ ಸಾಧನವು ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ. ಆದರೂ ಇದು ಆನ್‌ಲೈನ್ ಮಾರುಕಟ್ಟೆಯಲ್ಲಿ ಅನಿಯಂತ್ರಿತವಾಗಿ ಮಾರಾಟವಾಗುತ್ತಿದೆ ಮತ್ತು ಪೋರ್ಟಬಲ್ ಆಗಿರುವುದರಿಂದ ಜನರು ಇದನ್ನು ಪ್ರತಿನಿತ್ಯ ಖರೀದಿಸಿ ಬಳಸುತ್ತಿದ್ದಾರೆ.
ಏನಿದು ಡಿವೈಸ್ ?
ಈ ಸಾಧನದ ಹೆಸರು ಫ್ಲಿಪ್ಪರ್ ಝೀರೋ, ಇದು ಡಾಲ್ಫಿನ್ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಸೈಬರ್-ಡಾಲ್ಫಿನ್ ಮತ್ತು ಪಾಕೆಟ್ ಗಾತ್ರದ ಪೋರ್ಟಬಲ್ ಸಾಧನವಾಗಿದೆ. ಇದು ಹಾರ್ಡ್‌ವೇರ್ ತುಣುಕು. ಈ ಸಾಧನದ ಮೂಲಕ ಡಿಜಿಟಲ್ ಸಿಸ್ಟಮ್‌ಗಳೊಂದಿಗೆ ಸಂವಹನ ನಡೆಸಬಹುದು, ಅದನ್ನು ಬಳಸಿದಾಗ ಯಾವುದೇ ರೀತಿಯ ಪ್ರವೇಶ ನಿಯಂತ್ರಣ ವ್ಯವಸ್ಥೆ, RFID, ರೇಡಿಯೋ ಪ್ರೋಟೋಕಾಲ್‌ಗಳು ಮತ್ತು GPIO ಪಿನ್‌ಗಳನ್ನು ಬಳಸಿಕೊಂಡು ಡೀಬಗ್ ಹಾರ್ಡ್‌ವೇರ್ ಅನ್ನು ಪ್ರವೇಶಿಸಬಹುದು.
ಫ್ಲಿಪ್ಪರ್ ಝೀರೋ ಮೂಲಕ ದೈನಂದಿನ ಜೀವನದಲ್ಲಿ ಬಳಸುವ ಸಾಧನಗಳನ್ನು ನಿಯಂತ್ರಿಸಬಹುದು. ಈ ಸಾಧನದಿಂದ ನೀವು ಊಹಿಸಲೂ ಸಾಧ್ಯವಾಗದಂತಹ ಕೆಲವು ಕೆಲಸಗಳನ್ನು ಮಾಡಬಹುದು. ಫ್ಲಿಪ್ಪರ್ ಝೀರೋವನ್ನು ಬಳಸುವ ಮೂಲಕ ಯಾವುದೇ ಉತ್ಪನ್ನದ ಸ್ಕ್ಯಾನ್ ಕೋರ್ಟ್‌ಗೆ ಪ್ರವೇಶಿಸಬಹುದು ಮತ್ತು ಉತ್ಪನ್ನದ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದು ಕಳ್ಳತನಕ್ಕೆ ಸಮಾನವಾದ ಅಪಾಯಕಾರಿ ರೀತಿಯ ಬಳಕೆಯಾಗಿದೆ.
ಫ್ಲಿಪ್ಪರ್ ಝೀರೋ ಮೂಲಕ ಬಳಕೆದಾರರು ಮನೆಯಲ್ಲಿ ಇರಿಸಲಾಗಿರುವ ಲಾಕರ್‌ಗಳನ್ನು ಹ್ಯಾಕ್ ಮಾಡಬಹುದು ಮತ್ತು ಅವುಗಳನ್ನು ತೆರೆಯಬಹುದು, ಪಾಸ್‌ವರ್ಡ್‌ಗಳನ್ನು ಬದಲಾಯಿಸಬಹುದು. ಫ್ಲಿಪ್ಪರ್ ಝೀರೋವನ್ನು ಬಳಸಿ ಏರ್ ಕಂಡಿಷನರ್, ಟೆಲಿವಿಷನ್, ಡೋರ್‌ಬೆಲ್ ಅಥವಾ ಎನ್‌ಎಫ್‌ಸಿ ಟ್ಯಾಗ್‌ನಂತಹ ರಿಮೋಟ್ ನಿಯಂತ್ರಿತ ಉಪಕರಣಗಳನ್ನು ಸಹ ಪ್ರವೇಶಿಸಬಹುದು. ಈ ಸಾಧನವನ್ನು ಬ್ಲೂಟೂತ್ ಸಹಾಯದಿಂದ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದು. ಈ ಸಾಧನವನ್ನು ಹ್ಯಾಕಿಂಗ್‌ಗೆ ಬಳಸಲಾಗ್ತಿದೆ. ಮನರಂಜನೆಯ ದೃಷ್ಟಿಯಿಂದಲೂ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ.