ಆಯುಷ್ಯ ಗಟ್ಟಿಯಿದ್ದರೆ ಅದೆಂಥಾ ಅನಾಹುತದಿಂದಲೂ ಪಾರಾಗಿ ಬರಬಹುದು. ಈ ಮಾತನ್ನು ಸಾಬೀತು ಮಾಡುವ ವಿಡಿಯೋಗಳನ್ನು ನಾವು ಪದೇ ಪದೇ ಆನ್ಲೈನ್‌ನಲ್ಲಿ ಕಂಡಿದ್ದೇವೆ.
ವೇಗವಾಗಿ ಬೈಸಿಕಲ್ ಸವಾರಿ ಮಾಡುತ್ತಿರುವ ಯುವಕನೊಬ್ಬ, ರಸ್ತೆಯಲ್ಲಿ ಲಾರಿಯೊಂದು ನಿಂತಿದ್ದ ಕಾರಣ ಸ್ಪಷ್ಟವಾಗಿ ದಾರಿ ಕಾಣದೇ ಇದ್ದರೂ ಸಹ ಎಡಕ್ಕೆ ತಿರುಗಿದ್ದಾನೆ. ಇದೇ ವೇಳೆ ಎದುರು ದಿಕ್ಕಿನಿಂದ ಕಾರೊಂದು ಭಾರೀ ವೇಗದಲ್ಲಿ ಬರುತ್ತಿದೆ.
ನೋಡ ನೋಡುತ್ತಲೇ ಕಾರಿಗೆ ಗುದ್ದುತ್ತಾನೆ ಸೈಕ್ಲಿಸ್ಟ್. ಅಪಘಾತದ ರಭಸಕ್ಕೆ ಬೈಸಿಕಲ್ ಗಾಳಿಯಲ್ಲಿ ಹಾರಿ ನೆಲಕ್ಕಪ್ಪಳಿಸುತ್ತದೆ. ಇಷ್ಟೆಲ್ಲಾ ಆದರೂ ಸಹ ಪವಾಡಸದೃಶವಾಗಿ ಬೈಸಿಕಲ್ ಸವಾರ ಸ್ವಲ್ಪವೂ ನೋವಾಗದೇ ಪಾರಾಗುತ್ತಾನೆ.
https://twitter.com/whatcouIdGwrong/status/1640973127176929281?ref_src=twsrc%5Etfw%7Ctwcamp%5Etweetembed%7Ctwterm%5E1640973127176929281%7Ctwgr%5E1c37cc1ad20e67a7aac233ee4c1b7afcbc06ab46%7Ctwcon%5Es1_&ref_url=https%3A%2F%2Fwww.india.com%2Fviral%2Fman-on-bicycle-rams-into-moving-car-survives-in-an-unbelievable-way-watch-5970190%2F