
ಇದೇ ರೀತಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಭಕ್ತರೊಬ್ಬರು ಬರೋಬ್ಬರಿ 101 ಕೆಜಿ ತೂಕದ ಜೋಳದ ಚೀಲವನ್ನು ತಮ್ಮ ಬೆನ್ನಿನ ಮೇಲೆ ಹೊತ್ತು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ.
ರಾಯಪ್ಪ ದಫೇದಾರ ಎಂಬ ಈ ಭಕ್ತ ಅಂಜನಾದ್ರಿ ಬೆಟ್ಟದ 580 ಮೆಟ್ಟಿಲುಗಳನ್ನು 1 ಗಂಟೆ 10 ನಿಮಿಷಗಳ ಅವಧಿಯಲ್ಲಿ ಸರಾಗವಾಗಿ ಏರಿದ್ದು, ಬಳಿಕ ತಾವು ಹೊತ್ತು ತಂದ 101 ಕೆಜಿ ಜೋಳವನ್ನು ದೇವಸ್ಥಾನದ ದಾಸೋಹಕ್ಕೆ ಸಮರ್ಪಿಸಿದ್ದಾರೆ.

