alex Certify ನಿಮ್ಮ ಮಗು ದಿನದಿಂದ ದಿನಕ್ಕೆ ಕೋಪಿಷ್ಠನಾಗುತ್ತಿದೆಯೇ ? ಸಿಟ್ಟು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮಗು ದಿನದಿಂದ ದಿನಕ್ಕೆ ಕೋಪಿಷ್ಠನಾಗುತ್ತಿದೆಯೇ ? ಸಿಟ್ಟು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ

ಮಕ್ಕಳಲ್ಲಿ ಅತಿಯಾದ ಕೋಪ, ಆಕ್ರಮಣಶೀಲತೆಗೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆಲ್ಲ ಮಗು ರೊಚ್ಚಿಗೇಳುತ್ತದೆ. ಜೋರಾಗಿ ಅಳುವುದು, ಕೈಗೆ ಸಿಕ್ಕಿದ್ದನ್ನೆಲ್ಲ ಬಿಸಾಡುವುದು ಇಂತಹ ವರ್ತನೆಗಳನ್ನು ಮಕ್ಕಳು ತೋರುತ್ತಾರೆ. ಇಂತಹ ಆಕ್ರಮಣಕಾರಿ ವರ್ತನೆ ಹೊಂದಿರುವ ಮಗುವನ್ನು ಸಮಾಧಾನಪಡಿಸಲು ವಿಭಿನ್ನ ಮಾರ್ಗಗಳಿವೆ. ಮಗುವನ್ನು ಸಮಾಧಾನಪಡಿಸಲು ಕೆಲವು ಸರಳ ಸಲಹೆಗಳನ್ನು ಹೆತ್ತವರು ಪಾಲಿಸಬೇಕು.

ಆಕ್ರಮಣಕಾರಿ ವರ್ತನೆಯ ಮಗುವಿನೊಂದಿಗೆ ವ್ಯವಹರಿಸುವಾಗ  ಶಾಂತವಾಗಿ ಮತ್ತು ಸಹನೆಯಿಂದ ಇರುವುದು ಅತ್ಯಗತ್ಯ. ಇದು ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮಕ್ಕಳಲ್ಲಿ ಆಕ್ರಮಣಶೀಲತೆ ಸಾಮಾನ್ಯವಾಗಿ ಹತಾಶೆ, ಕೋಪ ಅಥವಾ ಇತರ ನಕಾರಾತ್ಮಕ ಭಾವನೆಗಳಿಂದ ಉಂಟಾಗುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ಮಗುವಿನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಭಾವನೆಗಳನ್ನು ಒಪ್ಪಿಕೊಳ್ಳಲು ಪ್ರಯತ್ನಿಸಿ. ಇದು ಅವರನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಗುವು ಅಸಮಾಧಾನಗೊಂಡಿದ್ದರೆ ಶಾಂತಗೊಳಿಸಲು ಸ್ವಲ್ಪ ಸಮಯ ಕೊಡಿ. ನೀವು ಕೂಡ ಕೋಪ ಮಾಡಿಕೊಂಡರೆ ಮಗು ಮತ್ತಷ್ಟು ಸಿಟ್ಟಿಗೇಳಬಹುದು. ಹಾಗಾಗಿ ಮಗುವಿಗೆ ಸ್ವಲ್ಪ ಸಮಯ ನೀಡಿ.

ಮಗುವಿನ ಗಮನವನ್ನು ಬೇರೆಡೆ ಸೆಳೆಯುವ ಮೂಲಕವೂ ಶಾಂತಗೊಳಿಸಬಹುದು. ಮಗು ರೊಚ್ಚಿಗೆದ್ದು ಅಳುತ್ತಿದ್ದಾಗ, ಅದು ಇಷ್ಟಪಡುವಂತಹ ಹೊಸ ಚಟುವಟಿಕೆ, ಆಟ ಅಥವಾ ಶಾಂತಗೊಳಿಸುವ ಕಾರ್ಯದಲ್ಲಿ ತೊಡಗಿಸಿ. ಮಗುವಿನ ಆಕ್ರಮಣಶೀಲತೆ ನಿರಂತರ ಅಥವಾ ತೀವ್ರವಾಗಿದ್ದರೆ, ವೃತ್ತಿಪರ ಸಹಾಯವನ್ನು ಪಡೆಯಬಹುದು. ಮಕ್ಕಳ ಮನಶ್ಶಾಸ್ತ್ರಜ್ಞರು ಅಥವಾ ಚಿಕಿತ್ಸಕರು ಈ ಸಮಸ್ಯೆ ಪರಿಹರಿಸಲು ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ನಿರ್ವಹಿಸಲು, ತಡೆಯಲು ಸಹಾಯ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...