
ವರುಣಾದಿಂದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ವಿಜಯೇಂದ್ರ ಆದರೂ ಬರಲಿ ಯಾರಾದರೂ ಆಗಲಿ ಎದುರಾಳಿ ಯಾರು ಎಂಬುದು ಮುಖ್ಯವಲ್ಲ, ಜನರ ಅಭಿಪ್ರಾಯ ಮುಖ್ಯ ಎಂದಿದ್ದಾರೆ.
ಎದುರಾಳಿ ಯಾರೇ ಬರಲಿ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ವರುಣಾದಲ್ಲಿ ಸ್ವತಃ ಯಡಿಯೂರಪ್ಪನವರೇ ಎದುರಾಳಿಯಾಗಿ ಬಂದ್ರೂ ಸ್ವಾಗತ ಮಾಡುತ್ತೇವೆ ಎಂದು ಅಖಾಡಕ್ಕೆ ಸ್ವಾಗತಿಸಿದ್ದಾರೆ.

