HomeInternational’ರಸ್ತೆ ಅಫಘಾತಗಳಿಗೆ ಜನರ ಬೇಜವಾಬ್ದಾರಿ ಚಾಲನೆಯೇ ಕಾರಣ’ ಎಂದು ಹೇಳಿದ ಕೆಲವೇ ದಿನಗಳಲ್ಲಿ ಅಫಘಾತದಲ್ಲೇ ಮೃತಪಟ್ಟ...

’ರಸ್ತೆ ಅಫಘಾತಗಳಿಗೆ ಜನರ ಬೇಜವಾಬ್ದಾರಿ ಚಾಲನೆಯೇ ಕಾರಣ’ ಎಂದು ಹೇಳಿದ ಕೆಲವೇ ದಿನಗಳಲ್ಲಿ ಅಫಘಾತದಲ್ಲೇ ಮೃತಪಟ್ಟ ಟೀನೇಜ್ ಟಿಕ್‌ಟಾಕರ್‌‌

ಟಿಕ್‌ಟಾಕ್ ತಾರೆ ಕಾರಾ ಸ್ಯಾಂಟೋರೆಲ್ಲಿ ತನ್ನ 18ನೇ ವಯಸ್ಸಿಗೇ ಕಾರು ಅಫಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಾರಾರ ತವರು ರಾಜ್ಯ ಫ್ಲಾರಿಡಾದಲ್ಲಿ ಈ ಘಟನೆ ಜರುಗಿದೆ.

ಮಾರ್ಚ್ 17ರಂದು ಈ ಅಫಘಾತವಾಗುವ ಕೆಲವೇ ದಿನಗಳ ಮುನ್ನ ರಸ್ತೆ ಅಫಘಾತಗಳಲ್ಲಿ ಮೃತಪಟ್ಟ ಜನರನ್ನು ಟೀಕಿಸಿದ್ದ ಕಾರಾ, ಜನರು ತಮ್ಮ ಬೇಜವಾಬ್ದಾರಿ ವರ್ತನೆಯಿಂದಾಗಿ ಹೀಗೆ ಅಪಘಾತಕ್ಕೆ ತುತ್ತಾಗುತ್ತಾರೆ ಎಂದಿದ್ದು. ಸುರಕ್ಷಿತ ಚಾಲನೆಗೆ ಅಗತ್ಯವಿರುವ ಸಕಲ ಸುರಕ್ಷತಾ ಕ್ರಮಗಳನ್ನು ತಾವು ತೆಗೆದುಕೊಳ್ಳುವ ಕಾರಣದಿಂದ ತಮಗೆ ಯಾವುದೇ ರೀತಿಯಲ್ಲೂ ಅಪಘಾತವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದ ಕಾರಾರ ವಿಡಿಯೋ ವೈರಲ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಹಳ ಮಂದಿ ತನ್ನನ್ನು ಕೆಟ್ಟ ಚಾಲಕಿ ಎಂದು ಬೈದರೂ ಸಹ ತಾನು ಯಾವುದೇ ಅಪಘಾತಕ್ಕೆ ಕಾರಣವಾಗಿಲ್ಲ ಎಂದು ತನ್ನ ಕಾರಿನಲ್ಲಿ ಕುಳಿತ ವೇಳೆ ಈಕೆ ಹೇಳಿದ್ದ ವಿಡಿಯೋವನ್ನು 15 ದಶಲಕ್ಷ ಮಂದಿ ವೀಕ್ಷಿಸಿದ್ದರು.

ಫ್ಲಾರಿಡಾದ ಎಸ್ಕಾಂಬಿಯಾ ಕೌಂಟಿಯ ಹೆದ್ದಾರಿ 29ರಲ್ಲಿ ಪ್ರಯಾಣಿಸುತ್ತಿದ್ದ ಕಾರಾ ಸ್ಯಾಂಟೋರೆಲ್ಲಿ ಚಲಿಸುತ್ತಿದ್ದ ನಿಸ್ಸಾನ್ ಎಸ್‌ಯುವಿಗೆ ಎದುರಿನಿಂದ ತಪ್ಪಾದ ಪಥದಲ್ಲಿ ಬಂದ ಶೆವರ್ಲೆ ಸೆಡಾನ್ ಒಂದು ಢಿಕ್ಕಿ ಹೊಡೆದ ಪರಿಣಾಮ, ಒಂದು ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರೂ ಚಾಲಕರು ಮೃತಪಟ್ಟಿದ್ದಾರೆ ಎಂದು ಫ್ಲಾರಿಡಾ ಹೆದ್ದಾರಿ ಪೊಲೀಸರು ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular