ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡುವ ಅವಧಿಯನ್ನು ಕೇಂದ್ರ ಹಣಕಾಸು ಇಲಾಖೆ ವಿಸ್ತರಿಸಿ ಆದೇಶ ಹೊರಡಿಸಿದ್ದು, 1000 ರೂಪಾಯಿ ದಂಡದೊಂದಿಗೆ 2023ರ ಜೂನ್ 30ರ ವರೆಗೆ ಪಾನ್ ಕಾರ್ಡ್ – ಆಧಾರ್ ಜೋಡಣೆ ಮಾಡಬಹುದಾಗಿದೆ.
ಈ ಮೊದಲು ಮಾರ್ಚ್ 31ರೊಳಗೆ ಪಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆ ಮಾಡದಿದ್ದರೆ ಅಂತಹ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ತಿಳಿಸಲಾಗಿತ್ತು. ಹೀಗಾಗಿ ಬಹುತೇಕರು ಪಾನ್ ಕಾರ್ಡ್ – ಆಧಾರ್ ಜೋಡಣೆ ಮಾಡಲು ಮುಂದಾಗಿದ್ದು, ಒಂದು ಸಾವಿರ ರೂಪಾಯಿ ದಂಡ ವಿಧಿಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಸ್ವರ ಎತ್ತಿದ್ದರು.
ಇದೀಗ ಪಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆ ಮಾಡುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆಯೇ ಹೊರತು ದಂಡದಲ್ಲಿ ವಿನಾಯಿತಿ ನೀಡಲಾಗಿಲ್ಲ. 2022 ರ ಜೂನ್ ನಿಂದಲೇ ಪಾನ್ ಕಾರ್ಡ್ – ಆಧಾರ್ ಜೋಡಣೆ ಮಾಡಲು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದ್ದು, ಇದೀಗ ಈ ಅವಧಿ 2023ರ ಜೂನ್ 30ರ ವರೆಗೆ ವಿಸ್ತರಣೆಯಾಗಿದೆ.